ಪರಿವಿಡಿ

ಭಾರತದ ಉಪರಾಷ್ಟ್ರಪತಿ

Vice President of India

upa rashtrapati , uparashtrapati, vice president of india, first vice president of india, vice president of india list, ಉಪರಾಷ್ಟ್ರಪತಿ

upa rashtrapati , uparashtrapati, vice president of india, first vice president of india, vice president of india list, ಉಪರಾಷ್ಟ್ರಪತಿ

ಭಾರತದ ಗಣತಂತ್ರ ವ್ಯವಸ್ಥೆಯಲ್ಲಿ ರಾಷ್ಟ್ರಪತಿಯ ನಂತರದ ಸ್ಥಾನವೆಂದರೆ ಉಪರಾಷ್ಟ್ರಪತಿಯ ಸ್ಥಾನವಾಗಿದೆ .

ಇದು ಅಮೇರಿಕಾ ಸಂಯುಕ್ತ ಸಂಸ್ಥಾನದ ಉಪಾಧ್ಯಕ್ಷರ ಸ್ಥಾನ ಮಾನವನ್ನು ಹೋಲುತ್ತದೆ .

ಭಾರತದ ಸ್ವಾತಂತ್ರ್ಯ ಬಂದಾಗ ಉಪರಾಷ್ಟ್ರಪತಿ ಹುದ್ದೆಯು 3 ನೇ ಸ್ಥಾನದಲ್ಲಿತ್ತು .

ಆದರೆ 1956 ರಲ್ಲಿ ನೆಹರೂ ರವರು ” ವಾರೆಂಟ್ ಆಫ್ ಪ್ರೆಸಿಡೆನ್ಸ್ ” ನ್ನು ಬದಲಾಯಿಸಿ ಉಪರಾಷ್ಟ್ರಪತಿ ಹುದ್ದೆಯನ್ನು 2 ನೇ ಸ್ಥಾನವನ್ನು ನೀಡುವಂತೆ ಮಾಡಿದರು .

ಈ ಮೂಲಕ ಭಾರತದಲ್ಲ ಉಪರಾಷ್ಟ್ರಪತಿ ಹುದ್ದೆಯು 2 ನೇ ಸ್ಥಾನಕ್ಕೆ ಬಂದು ಪ್ರಧಾನಮಂತ್ರಿಯ ಹುದ್ದೆಯು 3 ನೇ ಸ್ಥಾನಕ್ಕೆ ಬಂದಿತು

ಭಾರತದ ಉಪರಾಷ್ಟ್ರಪತಿ ಹುದ್ದೆಗೆ ಅವಕಾಶ

ವಿಧಿ .63 , ಭಾರತದ ಉಪರಾಷ್ಟ್ರಪತಿ : ಭಾರತಕ್ಕೆ ಉಪರಾಷ್ಟ್ರಪತಿರತಕ್ಕದ್ದು

ಸಂವಿಧಾನದ 63 ನೇ ವಿಧಿಯು ಭಾರತಕ್ಕೆ ಉಪರಾಷ್ಟ್ರಪತಿ ಹುದ್ದೆಗೆ ಅವಕಾಶ ಕಲ್ಪಿಸಿದೆ .

ಉಪರಾಷ್ಟ್ರಪತಿಯ ಅಧಿಕಾರಗಳು :

ಸಂವಿಧಾನದಲ್ಲಿ ಉಪರಾಷ್ಟ್ರಪತಿಯವರಿಗೆ ಪ್ರತ್ಯೇಕವಾದ ಅಧಿಕಾರವನ್ನು , ಕರ್ತವ್ಯಗಳನ್ನು ಸೂಚಿಸಿಲ್ಲ . ಕೆಲವು ವಿಧಿಗಳಲ್ಲಿ ಅವರ ಅಧಿಕಾರವನ್ನು ತಿಳಿಸುತ್ತವೆ ಅಂತಹ ಅಧಿಕಾರಗಳೆಂದರೆ ,

ವಿಧಿ .64 . ಉಪರಾಷ್ಟ್ರಪತಿಯು ತನ್ನ ಪದನಿಮಿತ್ತ ರಾಜ್ಯ ಸಭೆಯ ಸಭಾಪತಿಯಾಗಿರತಕ್ಕುದು

ಸಂವಿಧಾನದ 64 ನೇ ವಿಧಿ ಅನ್ವಯ ಭಾರತದ ಉಪರಾಷ್ಟ್ರಪತಿಗಳು ಪದನಿಮಿತ್ತ ರಾಜ್ಯ ಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ .

ಲೋಕಸಭೆಯಲ್ಲಿ ಸಭಾಧ್ಯಕ್ಷರು ಕಾರ್ಯನಿರ್ವಹಿಸುವಂತೆ ರಾಜ್ಯ ಸಭೆಯಲ್ಲಿ ಉಪರಾಷ್ಟ್ರಪತಿಗಳು ಕಾರ್ಯನಿರ್ವಹಿಸುತ್ತಾರೆ .

ಉಪರಾಷ್ಟ್ರಪತಿಗಳ ಹುದ್ದೆಯು ಅಮೆರಿಕಾದ ಭಾರತದಲ್ಲಿ ಉಪಾಧ್ಯಕ್ಷರ ಕಾರ್ಯವನ್ನು ಹೋಲುತ್ತಿದ್ದು ಅಮೆರಿಕಾದ ಉಪಾಧ್ಯಕ್ಷರು ಅಮೆರಿಕಾದ ಮೇಲ್ಮನೆಯ ( ಸೆನೆಟ್ ) ಸಭಾಧ್ಯಕ್ಷರಾಗಿತ್ತಾರೆ .

ರಾಷ್ಟ್ರಪತಿಯ ಹುದ್ದೆಯು ಖಾಲಿಯಾದ ಸಂದರ್ಭದಲ್ಲಿ ಹಂಗಾಮಿ ರಾಷ್ಟ್ರಪತಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ .

ಅಂತಹ ಸಂದರ್ಭದಲ್ಲಿ ರಾಜ್ಯ ಸಭೆಯ ಉಪಾಧ್ಯಕ್ಷರು ಸಭಾ ಕಲಾಪಗಳನ್ನು ನಡೆಸಿಕೊಂಡು ಹೋಗುತ್ತಾರೆ . ಆ ಸಂದರ್ಭದಲ್ಲಿ ರಾಜ್ಯ ಸಭಾ ಸಭಾಪತಿ ಭಾರತದ ಸಂಬಳ ಸವಲತ್ತುಗಳನ್ನು ಪಡೆಯುವಂತಿಲ್ಲ .

ಆ ಸಂದರ್ಭದಲ್ಲಿ ರಾಷ್ಟ್ರಪತಿಗಳ ಸಂಬಳ ಸವಲತ್ತುಗಳನ್ನು ಪಡೆಯುತ್ತಾರೆ .

 ವಿಧಿ.65.ರಾಷ್ಟ್ರಪತಿಯ ಪದವು ಆಕಸ್ಮಿಕವಾಗಿ ಪಾಲಯಾದಲ್ಲ ಅಥವಾ ರಾಷ್ಟ್ರಪತಿಯ ಉಪರಾಷ್ಟ್ರಪತಿಯು ಗೈರುಹಾಜರಿಯಲ್ಲ ರಾಷ್ಟ್ರಪತಿಯಾಗಿ  ನಡೆಸುವುದು ಅಥವಾ ಅವನ ಪ್ರಕಾರ್ಯಗಳನ್ನು ನಿರ್ವಹಿಸುವುದು .

ಸಂವಿಧಾನದ 65 ನೇ ವಿಧಿ ಪ್ರಕಾರ ರಾಷ್ಟ್ರಪತಿಗಳು ನಿಧನರಾದರೆ ಅಥವಾ ವಿದೇಶಿ ಪ್ರವಾಸಕ್ಕೆ ತೆರಳಿದರೆ ಅಥವಾ ರಾಜೀನಾಮೆ ನೀಡಿದರೆ ಉಪರಾಷ್ಟ್ರಪತಿ ರಾಷ್ಟ್ರಪತಿಯ ಅಧಿಕಾರವನ್ನು ಚಲಾಯಿಸಬಹುದು .

ವೇತನ ಹಾಗೂ ಸವಲತ್ತುಗಳು :

1998 ರಿಂದ ಉಪರಾಷ್ಟ್ರಪತಿಯ ಸಂಬಳವನ್ನು 40 ಸಾವಿರಗೆ ಹೆಚ್ಚಿಸಲಾಯಿತು .

2008 ಸೆಪ್ಟೆಂಬರ್ II ರಿಂದ ಉಪರಾಷ್ಟ್ರಪತಿಗಳ ಸಂಬಳವನ್ನು 40 ಸಾವಿರದಿಂದ 1.25 ಲಕ್ಷಕ್ಕೆ ಏರಿಸಲಾಯಿತು , ಸಂಬಳವನ್ನು ಸಂಚಿತ ನಿಧಿಯಿಂದ ಪಡೆಯುತ್ತಾರೆ .

ಪ್ರಸ್ತುತವಾಗಿ ಉಪರಾಷ್ಟ್ರಪತಿಗಳು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ . ಉಪರಾಷ್ಟ್ರಪತಿಗಳ ಸಂಬಳವನ್ನು 1.5 ಲಕ್ಷದಿಂದ 3.5 ಲಕ್ಷಕ್ಕೆ ಏರಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು .

ಸಂಸತ್ತು ಇದಕ್ಕೆ ಅಂಗೀಕಾರ ನೀಡಿದೆ . ಈ ಮೂಲಕ ಉಪರಾಷ್ಟ್ರಪತಿಗಳ ಸಂಬಳವು ಮಾಸಿಕ 3.5 ಲಕ್ಷ ರೂಗಳಾಗಿವೆ .

ಉಪರಾಷ್ಟ್ರಪತಿಗಳು ಹಂಗಾಮಿ ರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿದರೆ ರಾಷ್ಟ್ರಪತಿಯ ಸಂಬಳವನ್ನು ಪಡೆಯುತ್ತಾರೆ . ಇವರು ವಾಸಿಸಲು ನವದೆಹಲಿಯಲ್ಲಿ ಪ್ರತ್ಯೇಕವಾದ ಅಧಿಕೃತ ನಿವಾಸವನ್ನು ,

ವೈದ್ಯಕೀಯ , ಪ್ರಯಾಣ ಭತ್ಯೆ , ಉಚಿತ ವಿದ್ಯುತ್ , ದೂರವಾಣಿ ಇತ್ಯಾದಿ ಸೌಲಭ್ಯ ಪಡೆಯುತ್ತಾರೆ . ಇವರು ನಿವೃತ್ತರಾದ ಮೇಲೆ ಪಿಂಚಣಿ ಪಡೆಯುತ್ತಾರೆ .

ಉಪರಾಷ್ಟ್ರಪತಿ ಚುನಾವಣೆ

ವಿಧಿ .66 . ಉಪರಾಷ್ಟ್ರಪತಿಯ ಚುನಾವಣೆ ರೆ .

ಸಂವಿಧಾನದ 66 ( 1 ) ನೇ ವಿಧಿಯ ಅನ್ವಯ ಉಪರಾಷ್ಟ್ರಪತಿಯು ಕೂಡ ರಾಷ್ಟ್ರಪತಿಯಂತೆ ಪರೋಕ್ಷ ಮತದಾನದ ಮೂಲಕ ಆಯ್ಕೆಯಾಗುತ್ತಾ ಉಪರಾಷ್ಟ್ರಪತಿ ಯವರು ಸಂಸತ್ತಿನ ಎರಡು ಸದನಗಳ ಎಲ್ಲಾ ಸದಸ್ಯರಿಂದ ಆಯ್ಕೆಯಾಗುತ್ತಾ ರೆ .

( ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ತಿನ ನಾಮಕರಣ & ಚುನಾಯಿತ ಸದಸ್ಯರುಗಳು ಚಲಾಯಿಸುತ್ತಾರೆ . ಆದರೆ ರಾಷ್ಟ್ರಪತಿ ಚುನಾವಣೆಯಲ್ಲಿ ಚುನಾಯಿತ ಸದಸ್ಯರು ಮಾತ್ರ ಮತದಾನ ಮಾಡುತ್ತಾರೆ . ) ಇವರನ್ನು ಗುಪ್ತ ಮತದಾನದ ಮೂಲಕ ಏಕ ಮತವನ್ನು ಪ್ರಮಾಣಾನುಗುಣ ಪದ್ಧತಿಗೆ ಅನುಗುಣವಾಗಿ ಚುನಾಯಿಸಲಾಗುತ್ತದೆ .

ಪ್ರಾರಂಭದಲ್ಲಿ ಉಪರಾಷ್ಟ್ರಪತಿಯವರನ್ನು ಜಂಟಿ ಅಧಿವೇಶನದಲ್ಲಿ ಎರಡೂ ಸದಸ್ಯರು ಆಯ್ಕೆಮಾಡುತ್ತಿದ್ದರು .

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ತಿನ ಎರಡೂ ಸದನದ ಸದಸ್ಯರೂ ಪಾಲ್ಗೊಳ್ಳುವುದರಿಂದ ಜಂಟಿ ಸದನದ ಅವಶ್ಯಕತೆ ಇಲ್ಲವೆಂದು 1961 ರಲ್ಲಿ ಸಂವಿಧಾನದ 11 ನೇ ತಿದ್ದುಪಡಿ ಮಾಡಲಾಯಿತು .

 

ಉಪರಾಷ್ಟ್ರಪತಿಯ ಅರ್ಹತೆಗಳು :

ಉಪರಾಷಪತಿಯ ಸ್ಥಾನಕ್ಕೆ ಸ್ಪರ್ಧಿಸುವವರು ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕು 66 ನೇ ( 3 ) ವಿಧಿ ಪ್ರಕಾರ ಇರುವ ಅರ್ಹತೆಗಳು

1 ) ಭಾರತದ ಪ್ರಜೆಯಾಗಿರಬೇಕು

2 ) 35 ವರ್ಷ ವಯಸ್ಸಾಗಿರಬೇಕು

3 ) ರಾಜ್ಯಸಭಾ ಸದಸ್ಯನ 66 ( 4 ) ನೇ ವಿಧಿ ಹೊಂದಿರ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರಬೇಕು , ಅಲ್ಲದೇ ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಥವಾ ಇತರೆ ಸ್ಥಳೀಯ ಪ್ರಾಧಿಕಾರದಲ್ಲಿ ಲಾಭದಾಯಕ ಹುದ್ದೆ ಹೊಂದಿರಬಾರದು .

 ಉಪರಾಷ್ಟ್ರಪತಿ ಚುನಾವಣೆ ಕಾಯ್ದೆಗಳು

ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ 1952 ರ ಚುನಾವಣಾ ಕಾಯ್ದೆಯನ್ನು ಜಾರಿಗೆ ತರಲಾಯಿತು . 1952 ರ ಚುನಾವಣಾ ಕಾಯ್ದೆಯನ್ನು , 1974,1997 ರಲ್ಲಿ ಮತ್ತೆ ಬದಲಾವಣೆ ಮಾಡಲಾಯಿತು .

1997 ರ ಉಪರಾಷ್ಟ್ರಪತಿ ಚುನಾವಣಾ ಕಾಯ್ದೆಗೆ ಮೊದಲು ಉಪರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು 2500 ರೂಪಾಯಿಗಳ ಠೇವಣಿಯನ್ನು ಕಟ್ಟಬೇಕಿತ್ತು ಅಭ್ಯರ್ಥಿಯ ಹೆಸರನ್ನು ಸಂಸತ್ತಿನ ಐದು ಜನರು ಸೂಚಿಸಬೇಕು ಮತ್ತು 5 ಮಂದಿ ಅನುಮೋದಿಸಬೇಕು .

ಆದರೆ 1997 ರ ಹಾಗೂ ನಂತರ ತಿದ್ದುಪಡಿಯಲ್ಲಿ ಅಭ್ಯರ್ಥಿಯ ಠೇವಣಿ ಮೊತ್ತವನ್ನು 15 ಸಾವಿರಕ್ಕೆ ಹೆಚ್ಚಿಸಲಾಗಿದೆ . ಸೂಚಕರ ಹಾಗೂ ಅನುಮೋದಕರ ಸಂಖ್ಯೆಯನ್ನು 20 ಕ್ಕೆ ಹೆಚ್ಚಿಸಲಾಗಿದೆ .

ಉಪರಾಷ್ಟ್ರಪತಿಯ ಅಧಿಕಾರಾವಧಿ & ಪದಚ್ಯುತಿ

ವಿಧಿ .67 . ಉಪರಾಷ್ಟ್ರಪತಿಯ ಪದಾವಧಿ

ಸಂವಿಧಾನದ 67 ನೇ ವಿಧಿಯ ಅನ್ವಯ ಉಪರಾಷ್ಟ್ರಪತಿ ಯವರು ಅಧಿಕಾರ ಸ್ವೀಕರಿಸಿದ ದಿನದಿಂದ ಐದು ವರ್ಷಗಳ ಕಾಲ ಅಧಿಕಾರದಲ್ಲಿರುತ್ತಾರೆ . ಇವರು ತಮ್ಮ ಅಧಿಕಾರಾವಧಿಗೂ ಮುಂಚೆ ರಾಜೀನಾಮೆ ನೀಡಬಹುದು . ರಾಷ್ಟ್ರಪತಿಗೆ ಪತ್ರ ಬರೆದು ರಾಜೀನಾಮೆ ನೀಡಬಹುದು .

ಇವರ ಅವಧಿ ಮುಗಿದರೂ ಉತ್ತರಾಧಿಕಾರಿ ಅಧಿಕಾರಕ್ಕೆ ಬರುವವರೆಗೂ ಅಧಿಕಾರದಲ್ಲಿ ಮುಂದುವರಿಯಬಹುದು ಎಂದು ಸಂವಿಧಾನದ 67 ( ಸಿ ) ವಿಧಿ ತಿಳಿಸುತ್ತದೆ .

ಇವರ ಅವಧಿ ಮುಗಿಯುವ ಮುಂಚೆ ಚುನಾವಣೆ ನಡೆಸಬೇಕು . ಉಪರಾಷ್ಟ್ರಪತಿಯಾದವರು ಮರಣ ಹೊಂದಿದರೆ ಅಥವಾ ರಾಜೀನಾಮೆ ನೀಡಿದರೆ ಅಥವಾ ಪದಚ್ಯುತಿಗೊಂಡರೆ ತಕ್ಷಣ ಚುನಾವಣೆ ನಡೆಸಬೇಕು .

ಉಪರಾಷ್ಟ್ರಪತಿಯ ಪದಚ್ಯುತಿ

ಉಪರಾಷ್ಟ್ರಪತಿಯನ್ನು ಪದಚ್ಯುತಿಗೊಳಿಸುವ ಅಧಿಕಾರ ರಾಜ್ಯಸಭೆಗೆ ಇದೆ . ರಾಜ್ಯಸಭೆಯು ಉಪರಾಷ್ಟ್ರಪತಿಯನ್ನು ಪದಚ್ಯುತಿಗೊಳಿಸುವ ಮೊದಲ 14 ದಿನೆ ನೋಟಿಸ್ ನೀಡಬೇಕೆಂದು

ಅಂತಹ ನಿರ್ಣಯವನ್ನು ಬಹುಮತದಿಂದ ಅಂಗೀಕರಿಸಿದ ಮೇಲೆ ಲೋಕಸಭೆಯು ( ಎಧಿ 67,68,71 ) ಅದನ್ನು ಒಪ್ಪಿದರೆ ಉಪರಾಷ್ಟ್ರಪತಿಗಳು ಕಳೆದುಕೊಳ್ಳುವರು ತಮ್ಮ ಅಧಿಕಾರ ಎಂಬುದಾಗಿ ಸಂವಿಧಾನದ ವಿಧಿ 67 ತಿಳಿಸುತ್ತದೆ .

ಈ ವಿಧಿಯಲ್ಲಿ ಪದಚ್ಯುತಿಗೆ ಕಾರಣಗಳನ್ನು ತಿಳಿಸಿಲ್ಲ . ಇದುವರೆವಿಗೂ ಯಾವುದೇ ಉಪರಾಷ್ಟ್ರಪತಿಯನ್ನು ಪದಚ್ಯುತಿಗೊಳಿಸಿಲ್ಲ .

ಉಪರಾಷ್ಟ್ರಪತಿಗಳ ಹುದ್ದೆ ಖಾಲಯಾದಾಗ ಭರ್ತಿ ಮಾಡುವುದು

ವಿಧಿ .68 . ಉಪರಾಷ್ಟ್ರಪತಿಯ ಪದವು ಖಾಲಯಾದಲ್ಲಿ ಅದನ್ನು ಭರ್ತಿ ಮಾಡಲು ಚುನಾವಣೆ ನಡೆಸುವ ಕಾಲ ಮತ್ತು ಆಕಸ್ಮಿಕ ಖಾಲಸ್ಥಾನವನ್ನು ಭರ್ತಿಮಾಡಲು ಚುನಾಯಿತನಾದ ವ್ಯಕ್ತಿಯ ಪದಾವಧಿ

ಸಂವಿಧಾನದ 8 ನೇ ವಿಧಿಯು ಉಪ ರಾಷ್ಟ್ರಪತಿಯ ತನ್ನ ಅಧಿಕಾರ ಅವಧಿ ಮುನ್ನವೇ ಹುದ್ದೆ ಖಾಲಿಯಾದರೆ ಅಂತಹ ಸಂದರ್ಭದಲ್ಲಿ ಅಧಿಕಾರವಧಿಯ ಒಳಗೆ ಚುನಾವಣೆ ನಡೆಸಿ ,

ಹೊಸ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡಬೇಕೆಂದು ತಿಳಿಸುತ್ತದೆ . ಹೊಸದಾಗಿ ಖಾಲಿಯಾದ ಸ್ಥಾನಕ್ಕೆ ಆಯ್ಕೆಯಾದ ಉಪರಾಷ್ಟ್ರಪತಿಯು ಕೂಡ ಅಧಿಕಾರ ಸ್ವೀಕರಿಸಿದ ದಿನದಿಂದ ವರ್ಷಗಳ ಅಧಿಕಾರವಧಿ ಹೊಂದಿರುತ್ತಾನೆ .

ಉದಾ : ಭಾರತದ ಉಪರಾಷ್ಟ್ರಪತಿಗಳಾಗಿದ್ದ ಕೃಷ್ಣಕಾಂತ ಅಧಿಕಾರದಲ್ಲಿದ್ದಾಗಲೇ ಜುಲೈ 27 , ನಿಧನರಾದರು . ಸಂದರ್ಭದಲ್ಲಿ 2002 ರಲ್ಲಿ ಸಿಂಗ್ ಶೇಖಾವತ್‌ರವರು ಅವರ ಅಧಿಕಾರವಧಿಯು ಆ .21 , 1997 ರಿಂದ ಪ್ರಾರಂಭವಾಗಿತ್ತು .

ಅವರ ಖಾಲಿ ಸ್ಥಾನಕ್ಕೆ ಬೈರಾನ್ ಉಪರಾಷ್ಟ್ರಪತಿಯಾಗಿ ಆಗಸ್ಟ್ 19 , 2002 ರಲ್ಲಿ ಆಯ್ಕೆಯಾದರು . ಅವರು 2007 ಜು .21 ರವರೆಗೆ 5 ವರ್ಷಗಳ ಕಾಲ ಅಧಿಕಾರ ನಡೆಸಿದರು .

ವಿ.ವಿ.ಗಿರಿಯವರು 1967 ಮೇ .15 ರಿಂದ 1969 ಮೇ .3 ರವರೆಗೆ ಉಪರಾಷ್ಟ್ರಪತಿಯಾಗಿ ಕಾರ್ಯನಿ ರ್ವಹಿಸಿದ್ದರು . ರಾಷ್ಟ್ರಪತಿಯಾಗಿ ಹಾಗೂ ನಾಲ್ಕನೇ ರಾಷ್ಟ್ರಪತಿಯಾಗಿ ನೇಮಕಗೊಂಡರು . ಅವರ ” ತೆರವಾದ ಸ್ಥಾನಕ್ಕೆ ಜಿ.ಎಸ್.ಪಾಠಕ್‌ರವರು ಆಯ್ಕೆಯಾಗಿ 5 ವರ್ಷಗಳ ಕಾಲ ಅಧಿಕಾರವಧಿ ನಡೆಸಿದರು .

ಉಪರಾಷ್ಟ್ರಪತಿಯ ಪ್ರಮಾಣವಚನ

ವಿಧಿ .69 . ಉಪರಾಷ್ಟ್ರಪತಿಯಿಂದ ಪ್ರಮಾಣ ಅಥವಾ ದೃಢೀಕರಣ

ಸಂವಿಧಾನ 69 ನೇ ವಿಧಿಯು ಉಪರಾಷ್ಟ್ರಪತಿಗಳು ಪ್ರಮಾಣ ಸ್ವೀಕಾರ ಬಗ್ಗೆ ತಿಳಿಸುತ್ತದೆ . ಉಪರಾಷ್ಟ್ರಪತಿಯು ಸಂವಿಧಾನಕ್ಕೆ ವಿಧೇಯತೆಯಿಂದಿದ್ದು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತೇನೆಂದು ಪ್ರಮಾಣ ಸ್ವೀಕರಿಸುತ್ತಾರೆ .

ಉಪರಾಷ್ಟ್ರಪತಿಯವರಿಗೆ ಗೆ ರಾಷ್ಟ್ರಾಧ್ಯಕ್ಷರು ಪ್ರಮಾಣ ವಚನ ಬೋಧಿಸುವರು ಅಥವಾ ಅವರ ಅನುಪಸ್ಥಿತಿಯಲ್ಲಿ ರಾಷ್ಟ್ರಪತಿಯಿಂದ ನೇಮಕಗೊಂಡವರು ಪ್ರಮಾಣ ವಚನ ಬೋಧಿಸುವರು .

 ರಾಷ್ಟ್ರಪತಿಯ ಕಾರ್ಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಂಸತ್ತು ಉಪಬಂಧಗಳನ್ನು ರೂಪಿಸುವ ಬಗ್ಗೆ .

ವಿಧಿ70.ಇತರ ಆಕಸ್ಮಿಕ ಸಂದರ್ಭಗಳಲ್ಲಿ ರಾಷ್ಟ್ರಪತಿಯ ಪ್ರಕಾರ್ಯಗಳ ನಿರ್ವಹಣೆ

ಸಂವಿಧಾನದ 5 ನೇ ಭಾಗದಲ್ಲಿರುವ ರಾಷ್ಟ್ರ ಪತಿಗಳ ಕಾರ್ಯಗಳಿಗೆ ಸಂಬಂಧಿಸಿದಂತೆ ಸಂಸತ್ತು ಕೆಲವು ಆಕಸ್ಮಿಕ ಸಂದರ್ಭದಲ್ಲಿ ಉಪವಿಧಿಗಳನ್ನು ಸೇರ್ಪಡೆ ಮಾಡಬಹುದು .

ರಾಷ್ಟ್ರಪತಿ & ಉಪರಾಷ್ಟ್ರಪತಿ ಚುನಾವಣಾ ವಿವಾದಗಳು

ವಿಧಿ.71.ರಾಷ್ಟ್ರಪತಿಯ ಉಪರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ಅಥವಾ ಸೇರಿದ ವಿಷಯಗಳು

ಈ ವಿಧಿ ಅನ್ವಯ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ಹುದ್ದೆಗಳಿಗೆ ಸಂಬಂಧಿಸಿದ ಎಲ್ಲಾ ಸಂಶಯಗಳಿಗೂ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಸಿ ನೀಡಿದ ತೀರ್ಮಾನವೇ ಅಂತಿಮವಾಗಿರುತ್ತದೆ .

ಭಾರತದಲ್ಲೂ ರಾಷ್ಟ್ರಪತಿ ನಿಧನ ಅಥವಾ ರಾಜೀನಾಮೆ ಅಥವಾ ಪದಚ್ಯುತಿ ಹೊಂದಿದಾಗ ಆರು ತಿಂಗಳು ಮಾತ್ರ ಕಾರ್ಯನಿರ್ವಹಿಸಬಹುದಾಗಿದೆ .

ವಿಮರ್ಶೆ- ಉಪರಾಷ್ಟ್ರಪತಿ ಹುದ್ದೆ ಅವಶ್ಯಕತೆಯೇ ? * ಭಾರತದ ಗಣತಂತ್ರ ವ್ಯವಸ್ಥೆಯಲ್ಲಿ ರಾಷ್ಟ್ರಪತಿ ಹುದ್ದೆಯೇ ಉಪರಾಷ್ಟ್ರಪತಿ ಹುದ್ದೆ | ಅನವಶ್ಯಕ ಎಂಬ ವಾದವಿದೆ .

ರಾಜ್ಯಸಭೆಗೆ ಸಭಾಧ್ಯಕ್ಷರನ್ನು ರಾಜ್ಯಸಭೆಯಿಂದಲೇ ಉಪರಾಷ್ಟ್ರಪತಿಯವರಿಗೆ ಹೆಚ್ಚಿನ ಅಧಿಕಾರ ನೀಡಿ ಹುದ್ದೆಯನ್ನು ಮುಂದುವರಿಸಬೇಕೆಂಬ ನೇಮಿಸಬಹುದು ಅಥವಾ ಮಾತು ಕೇಳಿಬರುತ್ತಿದೆ .

ವಿಶೇಷತೆ : – ಭಾರತದ ಉಪರಾಷ್ಟ್ರಪತಿಗಳು ಸಂಸತ್ತಿನ ಯಾವುದೇ ಸದನದ ಸದಸ್ಯರಲ್ಲದಿದ್ದರೂ , ರಾಜ್ಯಸಭೆಯ ಅಧ್ಯಕ್ಷರಾಗಿ ಉಪರಾಷ್ಟ್ರಪತಿಗಳು ಕಾರ್ಯನಿರ್ವಹಿಸುತ್ತಾರೆ .

ರಾಜ್ಯಸಭೆಯ ಭಾರತದ ಪದನಿಮಿತ್ತ ಅಧ್ಯಕ್ಷರಾಗಿ ರಾಜ್ಯಸಭೆಯ ಕಲಾಪವನ್ನು ಸುಗಮವಾಗಿ ನಡೆಸಿಕೊಂಡು ಹೋಗುತ್ತಾರೆ . ಭಾರತದ ಉಪರಾಷ್ಟ್ರಪತಿಗಳು ರಾಜ್ಯಸಭೆಯ ಯಾವುದೇ ಮಸೂದೆಗೆ ಸಂಬಂಧಿಸಿದಂತೆ ಮತ ಹಾಕುವಂತಿಲ್ಲ .

ಭಾರತದ ಉಪರಾಷ್ಟ್ರಪತಿಗಳು ಯಾವುದೇ ನಿರ್ಣಯದ ಪರವಾಗಿ ಅಥವಾ ವಿರುದ್ಧವಾಗಿ ಮತ ಚಲಾಯಿಸುವ ಹಕ್ಕನ್ನು ಸದನದಲ್ಲಿ ಹೊಂದಿರುವುದಿಲ್ಲ . ಕಾರಣ ಇವರು ಸದನದ ಸದಸ್ಯರಾಗಿರುವುದಿಲ್ಲ .

 


0 Comments

Leave a Reply

Avatar placeholder

Your email address will not be published. Required fields are marked *