ಇಸ್ರೋ
isro, satish dhawan, k sivan, satish dhawan space centre, ur rao, isro news, indian space research organisation, isro bhuvan,
ನಮ್ಮ ಇಸ್ರೋದ ಸಾಧನೆಗಳು ಕೋವಿಡ್ ಕಾರಣಕ್ಕೆ ಬಾಹ್ಯಾಕಾಶ ಕ್ಷೇತ್ರ ಕಳೆದ ವರ್ಷ ಹಿನ್ನಡೆ ಕಂಡರೂ , ಈ ವರ್ಷ ಇಸ್ರೋ 7 ಉಪಗ್ರಹಗಳ ಉಡಾವಣೆಗೆ ಸಿದ್ಧತೆ ನಡೆಸಿದೆ .
ಇದರಲ್ಲಿ ಮಾನವ ಸಹಿತ ಗಗನಯಾನವೂ ಸೇರಿದೆ . ಇನ್ನುಳಿದ ಆರರ ಪೈಕಿ ಒಂದು ಉಪಗ್ರಹವನ್ನು ನ್ಯೂಸ್ ಸ್ಪೇಸ್ ಇಂಡಿಯ ಲಿಮಿಟೆಡ್ ( ಎನ್ಎಸ್ಐಎಲ್ ) ವಿದೇಶಿ ನೆಲದಿಂದ ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ .
ಉಳಿದವೆಲ್ಲವೂ ಶ್ರೀಹರಿಕೋಟ ಉಡಾವಣಾ ನೆಲೆಯಿಂದಲೇ ಉಡಾವಣೆಗೊಳ್ಳಲಿವೆ .
ಇದರಲ್ಲಿ ಮೂರು ಭೂ ವೀಕ್ಷಣಾ ಉಪಗ್ರಹಗಳಾಗಿದ್ದು , ಅದರಲ್ಲಿ ಒಂದು ಸಾಗರ ಅಧ್ಯಯನಕ್ಕೆ ಸಂಬಂಧಿಸಿದ್ದು ,
ಒಂದು ರಿಮೋಟ್ ಸೆನ್ಸಿಂಗ್ ಉಪಗ್ರಹ ,
ಒಂದು ನ್ಯಾವಿಗೇಷನ್ ಉಪಗ್ರಹಗಳಾಗಿವೆ . ಸೂರ್ಯನ ಅಧ್ಯಯನಕ್ಕೆ ಸಂಬಂಧಿಸಿದ ಆದಿತ್ಯ – ಎಲ್ 1 ಈ ವರ್ಷ ಉಡಾವಣೆಯಾಗಲ್ಲ ,
ಉಡಾವಣಾ ವಾಹಕಗಳ ಪೈಕಿ ಜಿಎಸ್ ಎಲ್ ವಿ ಮೂರು ಉಪಗ್ರಹವನ್ನು , ಎಸ್ಎಸ್ಎಲ್ಎ ಎರಡು ಉಪಗ್ರಹವನ್ನು , ಪಿಎಸ್ಎಲ್ವಿ ಒಂದು ಉಪಗ್ರಹವನ್ನು ಕಕ್ಷೆಗೆ ಸೇರಿಸಲಿವೆ .
ಟಾಟಾ ಸೈನ ಡಿಟಿಎಚ್ ಉದ್ಯಮಕ್ಕೆ ಅಗತ್ಯವಾದ ಜಿಸ್ಯಾಟ್ -24 ಉಪಗ್ರಹವನ್ನು ಆರಿಯನ್ಸ್ಪೇಸ್ ಮೂಲಕ ಎನ್ ಎಸ್ ಐಎಲ್ ಉಡಾವಣೆ ಮಾಡಲಿದೆ
2021 ರ ಇಸ್ರೋ ಯೋಜನೆಗಳು
ಉಪಗ್ರಹಗಳು ಉಡಾವಣೆ
ಇಓಎಸ್ -3 / ಜಿಐಎಸ್ಐಟಿ -1 ಮಾರ್ಚ್ – ಏಪ್ರಿಲ್
ಇಓಎಸ್ -2 ಏಪ್ರಿಲ್
ಇಓಎಸ್ -4 / ಆರ್ಐಎಸ್ಟಿ -1 ಎ ಜುಲೈ
ವಾಣಿಜ್ಯ ಉಪಗ್ರಹ ಜುಲೈ
ಇಓಎಸ್ -6 / ಓಸಿಯನ್ ಸ್ಕಾಟ್-3 ಅಕ್ಟೋಬರ್
ಎನ್ವಿಎಸ್ -01 / ಐಆರ್ಎನ್ಎಸ್ಎಸ್ -1ಜೆ ನವೆಂಬರ್
ಗಗನಯಾನ ಡಿಸೆಂಬರ್
ಹೈ ರೆಸಲ್ಯೂಷನ್ ಅಸ್ರೋ ರಾಡಾರ್
ಅಮೆರಿಕದ ವೈಮಾಂತರಿಕ್ಷ ಸಂಸ್ಥೆ ನಾಸಾ ಜತೆಗೂಡಿ ಭೂ ಸರ್ವೇಕ್ಷಣಾ ಉಪಗ್ರಹ ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ ( ಐಸೋ ) ,
ಭೂಮಿಯ ಅತ್ಯುತ್ಕೃಷ್ಟ ಚಿತ್ರಗಳನ್ನು ಸೆರೆಹಿಡಿಯುವ ರಾಡಾರ್ ಸಾಮರ್ಥ್ಯ ಹೊಂದಿರುವ ಸಿಂಥೆಟಿಕ್ ಅಪರ್ಚರ್ ರಾಡಾರ್ ( ಎಸ್ಎಆರ್ ) ಅಭಿವೃದ್ಧಿ ಹೀಗಾಗಿ ಕಾವ್ಯವನ್ನು ಭೂಮಿಯ ಅತ್ಯಂತ 3 ಡಿ ಸೃಷ್ಟಿಸಬಹುದು . ಪೂರ್ಣಗೊಳಿಸಿದೆ . ಜಂಟಿ ಸರ್ವೇಕ್ಷಣಾ ಉಪಗ್ರಹ ಯೋಜನೆಗೆ 2014 ರ ಸೆ .30 ರಂದು ಇಸ್ರೋ ಹಾಗೂ ನಾಸಾ ಒಪ್ಪಂದ ಮಾಡಿಕೊಂಡಿದ್ದವು .
ನಾಸಾ ಇಸ್ರೋ ಎಸ್.ಎಆರ್ ಎಂಬ ಈ ಯೋಜನೆಯನ್ನು ಸಂಕ್ಷಿಪ್ತವಾಗಿ ನಿಸಾರ್ ಎಂದು ಕರೆಯಲಾಗುತ್ತದೆ . ಎಲ್ ಹಾಗೂ ಎಸ್ ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡಾರ್ಗಳನ್ನು ಭೂ ಸರ್ವೇಕ್ಷಣೆಗೆ ಬಳಸುತ್ತಿರುವ ಮೊದಲ ಉಪಗ್ರಹ ಯೋಜನೆ ಇದಾಗಿದೆ .
2022 ರಲ್ಲಿ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಪಗ್ರಹ ಉಡ್ಡಯನದ ಗುರಿ ಇದೆ . ಭೂಮಿಯ ಮೇಲ್ಮನಲ್ಲಿ ಆಗುತ್ತಿರುವ ಬದಲಾವಣೆಗಳು , ಅದಕ್ಕೆ ಕಾರಣಗಳು ಹಾಗೂ ಅದರಿಂದಾಗುವ ಪರಿಣಾಮಗಳನ್ನು ಅತ್ಯಾಧುನಿಕ ರಾಡಾರ್ ಇಮೇಜಿಂಗ್ ಬಳಸಿ ಅಧ್ಯಯನ ನಡೆಸುವ ಯೋಜನೆ ಇದಾಗಿದೆ .
ಇಸ್ರೋದಿಂದ ವಿದ್ಯುತ್ ಬಳಸಿ ಹಾರುವ ರಾಕೆಟ್ !
ವೈಟ್ ಪೆಟ್ರೋಲ್ ಅಥವಾ ರಾಕೆಟ್ ಇಂಧನದ ಬದಲು ವಿದ್ಯುತ್ ಬಳಸಿ ರಾಕೆಟ್ ಹಾರಿಸುವ ತಂತ್ರಜ್ಞಾನವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ( ಇಸೋ ) ಅಭಿವೃದ್ಧಿಪಡಿಸುತ್ತಿದೆ .
ಎಲೆಕ್ಟಿಕ್ ಪ್ರೊಪಲ್ಟನ್ ಸಿಸ್ಟಮ್ ಎಂದು ಕರೆಯಲಾಗುವ ಈ ಎಂಜಿನ್ನ ತಯಾರಿಕೆ ಕೊನೆಯ ಹಂತದಲ್ಲಿದೆ .
ಪೆಟ್ರೋಲ್ , ಕೆರೋಸಿನ್ ಮಾದರಿಯ ರಾಕೆಟ್ ಇಂಧನವನ್ನು ರಾಕೆಟ್ಗಳ ಉಡಾವಣೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ . ಕೆಲ ವಿದೇಶಗಳಲ್ಲಿ ಈಗಾಗಲೇ ವಿದ್ಯುತ್ ಬಳಸಿ ರಾಕೆಟ್ಗಳನ್ನು ಹಾರಿಸಲಾಗುತ್ತಿದೆ .
ಅದು ಸ್ವಚ್ಛ ಇಂಧನವಾಗಿದ್ದು , ವಾಯುಮಾಲಿನ್ಯ ಉಂಟುಮಾಡುವುದಿಲ್ಲ .
ಆದರೆ , ಭಾರತದಲ್ಲಿ ಈಗಲೂ ದುಬಾರಿ ಹಾಗೂ ಪರಿಸರಕ್ಕೆ ಮಾರಕವಾದ ರಾಕೆಟ್ ಇಂಧನವನ್ನೇ ಬಳಸಲಾಗುತ್ತಿದೆ .
ಅದನ್ನು ತಪ್ಪಿಸಲು 300 ಎಂಎನ್ ಹೈ – ಫ್ರಸ್ಟ್ ಎಲೆಕ್ಟಿಕ್ ಪ್ರೊಪಲ್ಸನ್ ಸಿಸ್ಟಮ್ ಅಭಿವೃದ್ಧಿಪಡಿಸಲಾಗುತ್ತಿದೆ .
ಬಾಹ್ಯಾಕಾಶದಲ್ಲಿ “ ಸಿಂಧೂ ನೇತ್ರ ” ಉಪಗ್ರಹ ನಿಯೋಜನೆ
” ಸಿಂಧೂ ನೇತ್ರಾ ” ಕಕ್ಕಾವಲು ಉಪಗ್ರಹವನ್ನು ಇಸ್ರೋ ಉಡಾಯಿಸಿದೆ . ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿನ ಮಿಲಿಟರಿ ಯುದ್ಧ ನೌಕೆಗಳು ಮತ್ತು ವ್ಯಾಪಾರಿ ಸಾಗಾಣಿಕೆ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ .
ಈ ಉಪಗ್ರಹವು ಮೇಲ್ವಿಚಾರಣೆ ಮಾಡುವ ದೇಶದ ಕಣ್ಗಾವಲು ಸಾಮರ್ಥ್ಯಕ್ಕೆ ಉತ್ತೇಜನ ನೀಡಲಿದೆ . ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ( ISRO- Indian Space Research Organization ) PSLV ,
C51 ಉಡಾವಣಾ ವಾಹನದ ಮೂಲಕ ಆಂಧ್ರಪ್ರದೇಶದ ಸತೀಶ್ ಧವನ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು .
“ ಸಿಂಧೂ ನೇತ್ರಾ ” ಉಪಗ್ರಹವನ್ನು ಯುವ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದು ,
ಈ ಉಪಗ್ರಹವು ಹಿಂದೂ ಮಹಾಸಾಗರ ಪ್ರದೇಶ ಮಾತ್ರವಲ್ಲದೆ ಅಗತ್ಯವಿದ್ದಾಗ ದಕ್ಷಿಣ ಚೀನಾ ಸಮುದ್ರದಂತಹ ನಿರ್ದಿಷ್ಟ ಪ್ರದೇಶಗಳಲ್ಲಿ ಅಥವಾ ಆಫ್ರಿಕನ್ ಕರಾವಳಿಯ ಸುತ್ತಮುತ್ತ ಕಾವಲು ನಡೆಸಲು ಸಹಾಯ ಮಾಡುತ್ತದೆ .
ಚೀನಾ , ಪ್ರದೇಶದಲ್ಲಿ , ಅಡೆನ್ ಕೊಲ್ಲಿ ಮತ್ತು ಮತ್ತು ಪಾಕಿಸ್ತಾನದ ಗಡಿ ಪ್ರದೇಶಗಳು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಭೂ ಪ್ರದೇಶ ಕಾವಲು ಸಾಮರ್ಥ್ಯ ಹೆಚ್ಚಿಸಲು ಭಾರತಕ್ಕೆ ಸಹಾಯ ಮಾಡುವ ಉಪಗ್ರಹಗಳ ಸರಣಿ ಯಲ್ಲಿ ‘
ಸಿಂಧೂ ನೇತ್ರ ‘ ಮೊದಲನೆಯದು . ಕಡಲ್ಗಳ್ಳತನ ಪೀಡಿತ ಲಡಾಖ್ ಪ್ರದೇಶ
ಇಸ್ರೋ ಸೌಂಡಿಂಗ್ ರಾಕೆಟ್ ಆರ್ಹೆಚ್ -560
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ ) ಮಾರ್ಚ್ 12 , 2021 ರಂದು ಆರ್ ಹೆಚ್ -560 ಎಂಬ ಸೌಂಡಿಂಗ್ ರಾಕೆಟ್ ಅನ್ನು ಉಡಾವಣೆ ಮಾಡಿದೆ ,
ತಟಸ್ಥ ಗಾಳಿ ಮತ್ತು ಪ್ಲಾಸ್ಮಾ ಡೈನಾಮಿಕ್ಸ್ನಲ್ಲಿನ “ ವರ್ತನೆ ವ್ಯತ್ಯಾಸಗಳನ್ನು ” ಅಧ್ಯಯನ ಮಾಡುವ ಸಲುವಾಗಿ ಈ ರಾಕೆಟ್ ಅನ್ನು ಉಡಾಯಿಸಲಾಯಿತು .
ಆರ್ಎಚ್ -560 ರಾಕೆಟ್ ಅನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಶ್ರೀಹರಿಕೋಟಿ ಶ್ರೇಣಿಯಿಂದ ಉಡಾಯಿಸಲಾಯಿತು . ಈ ರಾಕೆಟ್ಗಳು ಶಬ್ದ ರಾಕೆಟ್ಗಳಾಗಿದ್ದು ,
ಒಂದು ಅಥವಾ ಎರಡು – ಹಂತದ ಘನ ಪ್ರೊಪೆಲ್ಲಂಟ್ ರಾಕೆಟ್ಗಳಾಗಿವೆ ಎಂದು ಇಸ್ರೋ ಹೈಲೈಟ್ ಮಾಡಿದೆ ,
ಈ ರಾಕೆಟ್ಗಳನ್ನು ಮೇಲಿನ ವಾತಾವರಣದ ಪ್ರದೇಶಗಳನ್ನು ತನಿಖೆ ಮಾಡಲು ಮತ್ತು ಬಾಹ್ಯಾಕಾಶ ಸಂಶೋಧನೆ ನಡೆಸಲು ಬಳಸಲಾಗುತ್ತದೆ .
ಉಡಾವಣಾ ವಾಹನಗಳು ಮತ್ತು ಉಪಗ್ರಹಗಳಲ್ಲಿ ಬಳಸಲು ಹೊಸ ಘಟಕಗಳು ಅಥವಾ ಉಪವ್ಯವಸ್ಥೆಗಳ ಮೂಲ ಮಾದರಿಗಳನ್ನು ಪರೀಕ್ಷಿಸಲು ಅಥವಾ ಸಾಬೀತುಪಡಿಸಲು ಸುಲಭವಾಗಿ ಕೈಗೆಟುಕುವ ಪ್ಲಾಟ್ ಫಾರ್ಮ್ಗಳಾಗಿ ರಾಕೆಟ್ಗಳು ಕಾರ್ಯನಿರ್ವಹಿಸುತ್ತವೆ .
ಇಸ್ರೋ 1965 ರಿಂದ ಸ್ಥಳೀಯವಾಗಿ ತಯಾರಿಸಿದ ಸೌಂಡಿಂಗ್ ರಾಕೆಟ್ಗಳನ್ನು ಉಡಾವಣೆ ಮಾಡಲು ಪ್ರಾರಂಭಿಸಿತ್ತು .
ಬಾಹ್ಯಾಕಾಶದಲ್ಲಿ ಹೋಟೆಲ್
ಜಗತ್ತಿನ ಮೊದಲ ಬಾಹ್ಯಾಕಾಶ ಹೋಟೆಲ್ 2027 ರಿಂದ ಕಾರ್ಯಾಚರಣೆ ಶುರು ಮಾಡಲಿದೆ . ಭೂಮಿಯಿಂದ 400 ಕಿ.ಮೀ. ಮೇಲಕ್ಕೆ ಬಾಹ್ಯಾಕಾಶದ ಕೆಳ ಕಕ್ಷೆಯಲ್ಲಿ 2025 ರಲ್ಲಿ ಈ ಹೋಟೆಲ್ ನಿರ್ಮಾಣ ಕಾರ್ಯ ಶುರುವಾಗಲಿದೆ ಎಂದು ಆರ್ಬಿಟಲ್ ಅಸೆಂಬ್ಲಿ ಕಾರ್ಪೊರೇಷನ್ ತಿಳಿಸಿದೆ .
2025 ರಲ್ಲಿ ಬಾಹ್ಯಾಕಾಶದಲ್ಲಿ ಕೆಳ ಭೂ ಕಕ್ಷೆಯಲ್ಲಿ ವೋಯೋಜರ್ ಸ್ಟೇಶನ್ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ .
ಬೃಹತ್ ತಿರುಗುವ ಚಕ್ರಕ್ಕೆ ವೈಯಕ್ತಿಕ ಪಾಡ್ಗಳನ್ನು ಜೋಡಿಸಿ ಈ ಹೋಟೆಲ್ ನಿರ್ಮಿಸಲಾಗುತ್ತದೆ . ಇದರಲ್ಲಿ 400 ಜನರಿಗೆ ಉಳಿದುಕೊಳ್ಳಲು ಸೌಕರ್ಯ ಏರ್ಪಡಿಸಲಾಗುತ್ತದೆ .
ಚಕ್ರದ ಆಕ್ಸಲ್ಗೆ ಎಕ್ಸ್ ಮಾದರಿಯಲ್ಲಿ ಬೇರೆ ಬೇರೆ ಪ್ರದೇಶಗಳನ್ನು ಜೋಡಿಸಲಾಗುತ್ತದೆ .
ಹೋಟೆಲ್ನಲ್ಲಿ ಥೀಮ್ಸ್ ರೆಸ್ಟೋರೆಂಟ್ , ಹೆಲ್ತ್ ಸ್ಟಾ , ಸಿನಿಮಾ ಹಾಲ್ ,
ಜಿಮ್ , ಲೈಬ್ರರಿ , ಕನ್ಸರ್ಟ್ ವೆನ್ಯೂ , ಭೂ ವೀಕ್ಷಣಾ ಲಾಂಚ್ ಬಾರ್ ಒಳಗೊಂಡಿರುತ್ತದೆ .
ಸಿಬ್ಬಂದಿಗೆ ಕ್ವಾರ್ಟಸ್್ರ ಕೂಡ ಗಗನ ನೌಕೆಯಲ್ಲಿ ಇರಲಿದೆ .
ನಿರ್ಮಾಣಕ್ಕೆ ರೋಬಾಟ್
ವೋಯೇಜರ್ ಅಥವಾ ಗಗನ ನೌಕೆಯ ಚೌಕಟ್ಟನ್ನು ನಿರ್ಮಿಸುವುದಕ್ಕೆ ರೋಬಾಟ್ ಸಿದ್ಧಪಡಿಸಲಾಗಿದೆ . ಇದಕ್ಕೆ ಸ್ಟಾರ್ ಎಂದು ನಾಮಕರಣ ಮಾಡಲಾಗಿದೆ .
ಬಾಹ್ಯಾಕಾಶದ ಕೆಳ ಭೂಕಕ್ಷೆಯಲ್ಲಿ ಗುರುತ್ವಾಕರ್ಷಣ ಶಕ್ತಿಯ ಪರೀಕ್ಷೆ ನಡೆಸಿದ ಬಳಿಕ ಗಗನ ನೌಕೆ ನಿರ್ಮಾಣ ಕಾರ ಶುರುವಾಗಲಿದೆ .
ಗಗನ ನೌಕೆಗೆ ಕೃತಕ ಗುರುತ್ವಾಕರ್ಷಣೆ
ಕೆಳ ಭೂ ಕಕ್ಷೆಯಲ್ಲಿ ನಿರ್ಮಾಣಗೊಳ್ಳಲಿರುವ ಗಗನ ನೌಕೆಗೆ ಕೃತಕ ಗುರುತ್ವಾಕರ್ಷಣೆ ಒದಗಿಸುವ ಚಿಂತನೆ ಇದೆ .
ಹಾಗೆ ಮಾಡಿದರೆ ಮಾತ್ರವೇ ಚಂದ್ರನ ಮಾದರಿಯಲ್ಲಿ ಭೂಮಿಗೆ ಅದು ಪ್ರದಕ್ಷಿಣೆ ಮಾಡಲಿದೆ ಗುರುತ್ವಾಕರ್ಷಣೆ ಮತ್ತು ಇತರೆ ಬಾಹ್ಯಾಕಾಶ ಸ್ಥಿತಿಗತಿಗಳ ಅಧ್ಯಯನ ಬಳಿಕ ಗಗನ ನೌಕೆ ನಿರ್ಮಾಣ ಕಾರ್ಯ ಶುರುವಾಗಲಿದೆ ಎಂದು ಆರ್ಜಿಟಲ್ ಆಸೆಂಬ್ಲಿ ತಿಳಿಸಿದೆ .
ಯಾರ ಚಿಂತನೆ ಇದು …
ನಾಸಾ ಅಪೊಲೋ ಕಾರ್ಯಕ್ರಮದ ಆರ್ಕಿಟೆಕ್ಟ್ ಆಗಿದ್ದ ವರ್ಡ್ಪ್ರೆರ್ ವೋನ್ ಬ್ರೌನ್ ಎಂಬುವವರ ಕಲ್ಪನೆಯ ಕೂಸು ಇದು .
1950 ರಲ್ಲೇ ಚಕ್ರಾಕಾರದ ಪ್ರದಕ್ಷಿಣೆ ಹಾಕುವ ಮಾನವ ವಸತಿಯನ್ನು ಬಾಹ್ಯಾಕಾಶದಲ್ಲಿ ನಿರ್ಮಿಸುವ ಪರಿಕಲ್ಪನೆಯನ್ನು ಇವರು ಪ್ರತಿಪಾದಿಸಿದ್ದರು .
ಇದೇ ಮಾದರಿಯ ವೋಯೇಜ್ ಸ್ಟೇಶನ್ ಕಲ್ಪನೆ ಬೃಹತ್ ಮಟ್ಟದಲ್ಲಿ 2012 ರಲ್ಲಿ ಗೇಟ್ ವೇ ಫೌಂಡೇಷನ್ನಿಂದ ಪ್ರಸ್ತಾವಿಸಲ್ಪಟ್ಟಿತ್ತು
ವಿದೇಶಿ ರಾಷ್ಟ್ರಗಳ ಬಾಹ್ಯಾಕಾಶ ಉಡಾವಣೆಗಳು
ಉಪಗ್ರಹಗಳು ದೇಶ ಉಡಾವಣಾ ವಾಹನ
ಚಾಂಗ್ ಇ -5 ಚೀನಾ ಲಾಂಗ್ಮಾರ್ಚ್ 5
ಮಾರ್ 2020 ಅಮೆರಿಕಾ
ರೋವರ್ಸ್
Mars 2020 Rovers
6 ಜಿ ಉಪಗ್ರಹ ಚೀನಾ ಲಾಂಗ್ಮಾರ್ಚ್ 6
ಉಪಗ್ರಹದ ವಿಶೇಷತೆ
ಚಂದ್ರನ ಮೇಲೆ ಮಾದರಿ ಸಂಗ್ರಹಿಸಲು
ಮಂಗಳ ಗ್ರಹದಿಂದ ಮಣ್ಣು , ಕಲ್ಲುಗಳ ಮಾದರಿ ಸಂಗ್ರಹಿಸಿ ಭೂಮಿಗೆ ತರುವ ಯೋಜನೆ , ಇದು ನಾಸಾ & ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಸಹಯೋಗ ಯೋಜನೆ
ಟೆರಾಹರ್ಟ್ಸ್ ತರಂಗಗಳನ್ನು ಬಳಸುತ್ತಿದ್ದ , 5 ಜಿ ಗಿಂತಲೂ ನೂರುಪಟ್ಟು ಅಂತರ್ಜಾಲದ ವೇಗವನ್ನು ಹೆಚ್ಚಿಸಲು
0 Comments