ಆದೇಶಸಂಧಿ

adesha sandhi in kannada , adesha sandhi 50 examples in kannada , kannada sandhi , kannada grammar sandhigalu, sandhigalu kannada grammar

adesha sandhi in kannada , adesha sandhi 50 examples in kannada , kannada sandhi , kannada grammar sandhigalu, sandhigalu kannada grammar

ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ ( ಸ್ಥಳದಲ್ಲಿ ) ಬೇರೊಂದು ಅಕ್ಷರವು ಬರುವುದೇ ಆದೇಶಸಂಧಿಯೆನಿಸುವುದು .

 ಉದಾ :

ಮಳೆ + ಕಾಲ = ಮಳೆಗಾಲ  ( ಕ ಕಾರಕ್ಕೆ ಗ ಕಾರ )

ಹೊಸ + ಕನ್ನಡ = ಹೊಸಗನ್ನಡ ( ಕ ಕಾಲಕ್ಕೆಗ ಕಾರ )

ಎಳೆ + ಕರು = ಎಳೆಗರು  ( ಕ ಕಾರಕ್ಕೆ ಗ ಕಾರ )

ಬೆಟ್ಟ + ತಾವರೆ = ಬೆಟ್ಟದಾವರೆ ( ತ ಕಾರಕ್ಕೆ ದ ಕಾರ )

ಮೈ + ಶೂಳೆ = – ಮೈದೊಳೆ ( ತ ಕಾರಕ್ಕೆ ದ ಕಾರ )

ಕಣ್ + ಬಸ = ಕಂಬನಿ ( ಪ ಕಾರಕ್ಕೆ ಬ ಕಾರ )

ಬೆನ್ + ಪತ್ತು = ಬೆಂಬತ್ತು ( ಪ ಕಾರಕ್ಕೆ ಬ ಕಾರ )

ನಿಯಮ :

ಸಂಧಿಯಾಗುವಾಗ ಒಂದು ವ್ಯಂಜನಾಕ್ಷರದ ಸ್ಥಾನದಲ್ಲಿ ಬೇರೊಂದು ವ್ಯಂಜನಾಕ್ಷರವು ಬರುವ ಆದೇಶಸಂಧಿ ಎನ್ನುತ್ತಾರೆ . ‘ ಆದೇಶ’ವೆಂದರೆ ಒಂದು ಅಕ್ಷರದ ಸ್ಥಾನದಲ್ಲಿ ಮತ್ತೊಂದು ಅಕ್ಷರ ಬರುವ

ಆ ) ಸಮಾಸದಲ್ಲಿ , ಉತ್ತರಪದದ ಆದಿಯಲ್ಲಿರುವ ಕ , ತ , ಪ ವ್ಯಂಜನಗಳಿಗೆ ಅನುಕ್ರಮವಾಗಿ ಗ , ದ , ಬ ವ್ಯ ೦ ಜನ ಆದೇಶವಾಗಿ ಬರುತ್ತವೆ . ( ಮೇಲಿನ ಉದಾಹರಣೆಗಳನ್ನು ಗಮನಿಸಿ ) ( ಸಮಾಸದ ವಿಗ್ರಹವಾಕ್ಯದಲ್ಲಿ ಮೊ ಪದ ಪೂರ್ವಪದ , ಎರಡನೆಯ ಪದ ಉತ್ತರ ಪದ ) .

ಆ ) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಪ , ಬ , ಮ , ವ್ಯಂಜನಗಳಿಗೆ ವಕಾರವು ಆದೇಶವಾಗಿ ಬರುತ್ತದೆ . ಉದಾ : ಎಳ + ಸರ = ಎಳವರ ( ಪಕಾರಕ್ಕೆ ವಕಾರಾದೇಶ ) ( ಬಕಾರಕ್ಕೆ ವಕಾರಾದೇಶ ) ( ಮಕಾರಕ್ಕೆ ವಕಾರಾದೇಶ ) ಎಳ + ಬಳ್ಳಿ = ಎಳವಳ್ಳಿ, ಮೆಲ್ + ಮಾತು = ಮೆಲ್ಬಾತು

ಇ ) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಸ ಕಾರಕ್ಕೆ ಸಾಮಾನ್ಯವಾಗಿ ಕೆಲವು ಕಡೆ ಚ ಕಾರವೂ , ಕೆಲವು ಕಡೆ ಜ ಕಾರವೂ , ಕೆಲವು ಕಡೆ ಛ ಕಾರವೂ ಆದೇಶವಾಗಿ ಬರುತ್ತವೆ . ಆದರೆ ಪೂರ್ವಪದದ ಕೊನೆಯಲ್ಲಿ ಯ್‌ , ಲ್ ‌ಗಳು ಇರಬಾರದು .

ಉದಾ :

ಇನ್ + ಸರ = ಇಂಚರ  ( ಸ ಕಾರಕ್ಕೆ ಚ ಕಾರಾದೇಶ )

ಮುನ್ + ಸೊಡರ್ = ಮುಂಜೊಡರ್ ( ಸ ಕಾರಕ್ಕೆ ಜ ಕಾರಾದೇಶ )

ನೂರ್ ಸಾಸಿರ = ನೂರ್ಛಾಸಿರ   ( ಸ ಕಾರಕ್ಕೆ ಧ ಕಾರಾದೇಶ ) ಆದೇಶ ಬಾರದೆ ಇರುವುದಕ್ಕೆ –

ಉದಾ : ಬಾಯ್ + ಸವಿ = ಬಾಯ್ಸ ವಿ ಬಲ್ + ಸೋನೆ = ಬಲ್ಲೋನ ಮೆಲ್ + ಸರ = ಮೆಲ್ಲರ ಸೂಚನೆ : ಆದೇಶಸಂಧಿ ಕನ್ನಡ ವ್ಯಂಜನ ಸಂಧಿಯಾಗಿದೆ .

ಪ್ರಕೃತಿಭಾವ :

ಸ್ವರದ ಮುಂದೆ ಸ್ವರವು ಬಂದರೂ , ಕೆಲವು ಕಡೆಗಳಲ್ಲಿ ಲೋಪ , ಆಗಮ ಮೊದಲಾದ ಸಂಧಿಕಾರ ಗಳಾಗದೆ ಇದ್ದ ಹಾಗೆಯೇ ಇರುವುದಕ್ಕೆ ಪ್ರಕೃತಿಭಾವವೆನ್ನುವರು .

ಉದಾ :

ಅಣ್ಣಾ + ಅಲ್ಲಿ ನೋಡು = ಅಣ್ಣಾ , ಅಲ್ಲಿ ನೋಡು

ಓಹೋ + ಅವನೇನು – ಓಹೋ ! ಅವನೇನು ?

ಆ + ಅಂಗಡಿ = ಆ ಅಂಗಡಿ .

‘ ಪ್ರಕೃತಿಭಾವ ‘ ಎಂದರೆ ಇದ್ದ 0 ತೆ ಇರುವುದು . ಸ್ವರದ ಮುಂದೆ ಸ್ವರ ಬ ೦ ದಾಗ ಲೋಪ ಅಥವಾ ಆಗಮಸಂಧಿಯಾಗಬೇಕು . ಆದರೆ ಸಂಧಿಯಾಗದೆ ಇದ್ದ ಹಾಗೆಯೇ ಇರುವುದಕ್ಕೆ ಪ್ರಕೃತಿಭಾವವೆನ್ನುತ್ತಾರೆ .

ಪ್ರಕೃತಿಭಾವ ಬರುವ ಸಂದರ್ಭಗಳು :

ಆ ) ಪುತ ಸ್ವರಗಳ ( ಸಂಶೋಧನೆಯಲ್ಲಿ ಬರುವ ಸ್ವರ ) ಮುಂದೆ ಸ್ವರ ಬಂದರೆ ಸಂಧಿಕಾರ್ಯ ಮಾಡಬಾರದು .

ಉದಾ : ಅಣ್ಣಾ + ಇಲ್ಲಿ ಬಾ = ಅಣ್ಣಾ , ಇಲ್ಲಿ ಬಾ . ರಾಮಾ + ಇತ್ತ ನೋಡು = ರಾಮಾ , ಇತ್ತ ನೋಡು . ದೇವರೇ + ಉದ್ಧರಿಸು = ದೇವರೇ , ಉದ್ಧರಿಸು .

ಆ ) ಭಾವಸೂಚಕಾವ್ಯಯಗಳಾದ ( ನಿಪಾತಾವ್ಯಯಗಳು ) ಆಹಹಾ , ಅಬ್ಬಾ , ಅಯ್ಯೋ , ಅಕ್ಕಟಾ , ಓಹೋ , ಛೇ , ಇತ್ಯಾದಿ ಶಬ್ದಗಳ ಮುಂದೆ ಸ್ವರ ಪರವಾದಾಗ ಸಂಧಿಕಾರ್ಯಗಳಾಗುವುದಿಲ್ಲ .

ಉದಾ : ಅಯ್ಯೋ + ಅವರಿಗೇನಾಯಿತು ? = ಅಯ್ಯೋ ! ಅವರಿಗೇನಾಯಿತು ? ಅಬ್ಬಾ + ಅದು ಹಾವೇ ? – ಅಬ್ಬಾ ! ಅದು ಹಾವೇ ? ಓಹೋ + ಅವನೇನು ? = ಓಹೋ ! ಅವನೇನು ? ಛೇ + ಅವನೆಲ್ಲಿ ? = ಛೇ ! ಅವನೆಲ್ಲಿ ?

ಇ ) ಆ  ಎ ೦ ಬ ಶಬ್ದದ ಮುಂದೆ ಅ , ಆ , ಐ , ಔ ಸ್ವರಗಳು ಬಂದರೆ ಸಂಧಿ ಮಾಡಬಾರದು .

ಉದಾ : ಆ + ಅಂಗಡಿ = ಆ ಅಂಗಡಿ ಆ + ಆಕಳು = ಆ ಆಕಳು ಆ + ಐಶ್ವರ್ಯ = ಆ ಐಶ್ವರ್ಯ ಆ + ಔದಾರ್ಯ = ಆ ಔದಾರ್ಯ

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳುಲಿಂಕ್ :

 

ವರ್ಣಮಾಲೆ

ಕನ್ನಡ ವ್ಯಂಜನಗಳು

ಗುಣಿತಾಕ್ಷರ

 


0 Comments

Leave a Reply

Avatar placeholder

Your email address will not be published. Required fields are marked *