
ಪರಿವಿಡಿ
ಆಗಮಸಂಧಿ
ಆಗಮಸಂಧಿ , agama sandhi examples in kannada , kannada sandhi , kannada grammar sandhigalu , sandhigalu kannada grammar , kannada agama sandhi
ಸ್ವರದ ಮುಂದೆ ಸ್ವರವು ಬಂದಾಗ ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ಪರಗಳ ಮಧ್ಯದಲ್ಲಿ ‘ ಯ’ಕಾರವನ್ನೋ ಅಥವಾ ‘ ವ’ಕಾರವನ್ನೋ ಹೊಸದಾಗಿ ಸೇರಿಸಿ ಹೇಳುತ್ತೇವೆ . ಇದಕ್ಕೆ ಆಗಮಸಂಧಿ ಎನ್ನುವರು .
ಉದಾ :
ಮನೆ + ಅಲ್ಲಿ = ಮನೆಯಲ್ಲಿ
ಎ+ಅ
ಯ
ವ್ಯಾಕರಣ + ಅನ್ನು = ವ್ಯಾಕರಣವನ್ನು
ಅ+ಅ
ವ
ಮಗು + ಇಗೆ = ಮಗುವಿಗೆ
ಉ+ಇ
ವ
ಗಿರಿ + ಅನ್ನು = ಗಿರಿಯನ್ನು
ಇ+ಅ
ಯ
ಕೆರೆ + ಅನ್ನು = ಕೆರೆಯನ್ನು
ಎ +ಅ
ಯ
‘ ಮನೆ + ಅಲ್ಲಿ ‘ – ಎನ್ನುವಲ್ಲಿ ಸ್ವರದ ಮುಂದೆ ಸ್ವರ ಬಂದಿದೆ . ಲೋಪಸಂಧಿಯ ನಿಯಮದಂತೆ ಹಿಂದಿನ ಸ್ವರ ಲೋಪವಾದರೆ ‘ ಮನಲ್ಲಿ ‘ ಎಂದಾಗಿ ಅರ್ಥ ಕೆಡುತ್ತದೆ . ಹಾಗೆಯೇ ವ್ಯಾಕರಣನ್ನು , ಮಗಿಗೆ , ಗಿರನ್ನು ಕೆರನ್ನು ಎಂದಾಗಿ ಮೇಲಿನ ಎಲ್ಲವೂ ತಮ್ಮ ಅರ್ಥವನ್ನು ಕಳೆದುಕೊಳ್ಳುತ್ತವೆ . ಇಂಥ ಸಂದರ್ಭಗಳಲ್ಲಿ ಆ ಎರಡು ಸ್ವರಗಳ ನಡುವೆ ‘ ಯ’ಕಾರ ಅಥವಾ ‘ ವ’ಕಾರ ಹೊಸದಾಗಿ ಸೇರುತ್ತವೆ .
ನಿಯಮ :
ಸ್ವರದ ಮುಂದೆ ಸ್ವರ ಬಂದು ಸಂಧಿಯಾಗುವಾಗ ಹಿಂದಿನ ಸ್ವರಕ್ಕೆ ಲೋಪ ಮಾಡಿದರೆ ಅರ್ಥ ಕೆಡುವ ಪಕ್ಷದಲ್ಲಿ ಎರಡು ಸ್ವರಗಳ ನಡುವೆ ‘ ಯ್’ಕಾರ ಅಥವಾ ‘ ವ್’ಕಾರವು ಹೊಸದಾಗಿ ಬರುತ್ತದೆ . ‘ ಆಗಮ’ವೆ ೦ ದರೆ ಹೊಸದಾಗಿ ಬರುವುದು .
ಆಗಮಸಂಧಿಯಲ್ಲಿ ಯಕಾರಾಗಮ ಸಂಧಿ , ವಕಾರಾಗಮ ಸಂಧಿ ಎಂದು ಎರಡು ವಿಧಗಳಿವೆ .
ಯಕಾರಾಗಮಸಂಧಿ :
ಆ , ಇ , ಈ , ಎ , ಏ , ಐ ಸ್ವರಗಳ ಮುಂದೆ ಸ್ವರ ಬಂದರೆ ಆ ಎರಡೂ ಸ್ವರಗಳ ನಡುವೆ ‘ ಯ್ ‘ ಕಾರವು ಆಗಮವಾಗುತ್ತದೆ .
ಉದಾ .
ಬಾ + ಎ ೦ ದನು = ಬಾಯೆಂದನು
ಸತಾ + ಇಸು = ಸತಾಯಿಸು
ಗಿರಿ + ಅನ್ನು = ಗಿರಿಯನ್ನು
ಹಳ್ಳಿ + ಇಂದ = ಹಳ್ಳಿಯಿಂದ
ಸ್ತ್ರೀ + ಇಂದ = – ಸ್ತ್ರೀಯಿಂದ
ಈ + ಆಲು = ಈಯಲು
ಕೆರೆ + ಅನ್ನು = ಕೆರೆಯನ್ನು
ಬೇ + ಇಸು = ಬೇಯಿಸು
ಮೇ + ಅದೆ = ಮೇಯದೆ
ಮೈ + ಇಂದ = ಮೈಯಿಂದ
ವಕಾರಾಗಮಸಂಧಿ
ಆ ) ಉ , ಊ , ಋ , ಓ ಸ್ವರಗಳ ಮುಂದೆ ಸ್ವರವು ಬಂದರೆ ನಡುವೆ ‘ ವ ‘ ಕಾರವು ಆಗಮವಾಗುತ್ತದೆ .
ಉದಾ :
ಮಗು + ಅನ್ನು = ಮಗುವನ್ನು
ಹೂ + ಇಂದ = ಹೂವಿಂದ
ಭಾತೃ + ಇಗೆ = : ಭ್ರಾತೃವಿಗೆ
ಗೋ + ಇಂದ = ಗೋವಿಂದ
ಆ ) ಆಕಾರದ ಮುಂದೆ ಆಕಾರವೇ ಬಂದಾಗ ವಕಾರಾಗಮವಾಗುವುದು .
ಉದಾ :
ನೆಲ + ಅನ್ನು = ನೆಲವನ್ನು
ಮನ + ಅನ್ನು = ಮನವನ್ನು
ಕುಲ + ಅನ್ನು = ಕುಲವನ್ನು
ಇ ) ‘ ಈ ‘ ಎನ್ನುವ ಪದದ ಮುಂದೆ ಉ , ಊ , ಒ , ಓ ಗಳು ಬಂದರೆ ಯಕಾರಾಗಮ ಅಥವಾ ವಕಾರಾಗಮ ಯಾವುದಾದರೂ ಆಗಬಹುದು .
ಉದಾ :
ಈ + ಉದಕ = ಈಯುದಕ , ಈವುದಕ
ಈ + ಉಂಗುರ = ಈಯುಂಗುರ , ಇವುಂಗು
ಸಂಧಿ ಮಾಡದೆಯೇ ಈ ಉದಕ , ಈ ಉಂಗುರ , ಈ ಊಟ , ಈ ಒಂಟೆ , ಈ ಓಲೆ ಎಂದೂ ಹೇಳಬಹುದು . ಓ ಕಾರದ ಮುಂದೆ ಸ್ವರ ಬಂದಾಗ ವಕಾರಾಗಮದ ಬದಲು ಕೆಲವು ಕಡೆ ಯಕಾರಾಗಮವಾಗುವುದು . ಉದಾ : ಗೋ + ಅನ್ನು = ಗೋವನ್ನು ( ವಕಾರಾಗಮ ) ನೋ + ಆಲು = ನೋಯಲು ( ಯಕಾರಾಗಮ )
ಸೂಚನೆ : ಲೋಪಸಂಧಿ , ಆಗಮಸಂಧಿಗಳು ಕನ್ನಡ ಸ್ವರಸಂಧಿಗಳಾಗಿವೆ .
ಆತ್ಮೀಯರೇ …
ನಮ್ಮ samagratv.com ವೆಬ್ಸೈಟ್ ನಲ್ಲಿ ಭಾರತದ ಸಂವಿಧಾನ ( constitution of india ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .
ಟೆಲಿಗ್ರಾಮ್ ಲಿಂಕ್
samagratv.com
ಇತರೆ ವಿಷಯಗಳುಲಿಂಕ್ :