ಅವ್ಯಯಅವ್ಯಯ,kannada ayavyagalu,ayavyagalu in kannada,kannada grammar,kannada grammar in kannada,kannada vyakarana list

ಅವ್ಯಯ,kannada ayavyagalu,ayavyagalu in kannada,kannada grammar,kannada grammar in kannada,kannada vyakarana list

 

ನಾಮವಾಚಕ , ಧಾತುಗಳಂತೆ ಲಿಂಗ- ವಚನ – ವಿಭಕ್ತಿಗಳ

ಕಾರವಿಲ್ಲದೆ ಅಥವಾ ರೂಪ ಭೇದವನ್ನು ಹೊಂದದೆ ಏಕರೂಪವಾಗಿರುವ ಶಬ್ದಗಳು ಅವ್ಯಯಗಳು ಎನಿಸುವುದು . ಅವ್ಯಯ ಪದಗಳು ನಾಮವಿಭಕ್ತಿ , ಕ್ರಿಯಾವಿಭಕ್ತಿ ಪ್ರತ್ಯಯಗಳನ್ನು ಮತ್ತು ಲಿಂಗ ವಚನಗಳನ್ನು ಹೊಂದಿರುವುದಿಲ್ಲ .

ಉದಾ : ಮತ್ತು ಹಾಗೆ , ಬಳಿಕ , ಆದರೆ , ಒಡನೆ , ಸುಮ್ಮನೆ ಇತ್ಯಾದಿಗಳು . ಅವಳು ಚೆನ್ನಾಗಿ ಓದಿದಳು . ( ಸ್ತ್ರೀಲಿಂಗ ಏ . ವ . ) ಅವರು ಚನ್ನಾಗಿ ಓದಿದರು . ( ಪು – ಸ್ತ್ರೀ ಬಹುವಚನ ) ಅದು ಚೆನ್ನಾಗಿ ಓಡುತ್ತದೆ . ( ನಪುಂಸಕ ಬಹುವಚನ ) ಅವ್ಯಯ ಪ್ರಕಾರಗಳು

1 ) ಸಾಮಾನ್ಯಾ ವ್ಯಯ : – ಒಂದು ಕ್ರಿಯೆಯು ನಡೆದ ರೀತಿಯನ್ನು ಹೇಳುವ ಅವ್ಯಯ ಸಾಮಾನ್ಯ ವ್ಯಯ ಎನಿಸುವುದು . ಇದನ್ನು ಕ್ರಿಯಾವಿಶೇಷಣಾ ಕಾವ್ಯಯ ಎಂದು ಕರೆಯುತ್ತಾರೆ . ಉದಾ : ಬೇಗನೆ , ತಟ್ಟನೆ , ಅತ್ತ , ಬೆಳ್ಳಗೆ , ಒಡನೆ , ಕಮ್ಮನೆ

ಇತ್ತ , ತೆಳ್ಳಗೆ ಅಲ್ಲಿ , ಇಲ್ಲಿ , ಆಗ , ಇಗ , ನಿನ್ನೆ , ಅಂದು , ಇಂದು , ವೇಗ , ಇತ್ಯಾದಿ .

2 ) ಅನುಕರಣಾ ವ್ಯಯ : – ಅರ್ಥವಿಲ್ಲದ ಧ್ವನಿ ವಿಶೇಷಗಳನ್ನು ಪುನಃ ಅನುಕರಣ ಮಾಡಿ ಹೇಳುವ ಶಬ್ದಗಳು ಅನುಕರಣಾವ್ಯಯ ಎನಿಸುವವು . ಉದಾ : ಮಳೆಯು

ಪಟಪಟನೆ ಬಿದ್ದಿತು . ಬೆಂಕಿ ಧಗಧಗ ಉರಿಯಿತು . ಹಾವು ಸರಸರ ಹರಿಯಿತು ಆಕಾಶ ಗುಡುಗುಡು ಗುಡುಗೀತು

3 ) ಭಾವಸೂಚಕಾವ್ಯಯ : – ಮನದಲ್ಲಿರುವ ಕೋಪ ತಾಪ – ಹರ್ಷ – ದುಃಖ – ತಿರಸ್ಕಾರ ಮುಂತಾದ ಮನೋಭಾವನೆಗಳನ್ನು ವ್ಯಕ್ತಪಡಿಸುವ ಅವ್ಯಯಗಳು ಭಾವಸೂಚಕ ಕಾವ್ಯಗಳು ಎನಿಸುವವು . ಉದಾ : ಆಯ್ಯೋ ! ಆಹಾ ! ಛೇ ಹೂ ಎಲೆಲೇ ಓಹೋ ಭಲೇ ಅಹಹಾ !

 4 ) ಕ್ರಿಯಾರ್ಥಕಾವ್ಯಯ : – ಕ್ರಿಯಾಪದದ ಸ್ಥಾನದಲ್ಲಿ ನಿಂತು ವಾಕ್ಯದ ಅರ್ಥಪೂರ್ಣಗೊಳಿಸುವ ಅವ್ಯಯಗಳು ಕ್ರಿಯಾರ್ಥಕಾವ್ಯಯ ಎನಿಸುವುವು . ಉದಾ : ಬೇಕು , ಸಾಕು , ಅಲ್ಲ , ಬೇಡ , ಹಾಕು , ಉಂಟು ,

5 ) ಸಂಬಂಧ ಸೂಚಕಾವ್ಯಯ : – ಎರಡು ಪದಗಳ ಇಲ್ಲವೇ ಎರಡು ವಾಕ್ಯಗಳ ಸಂಬಂಧವನ್ನು ಸೂಚಿಸುವ ಅವ್ಯಯಗಳನ್ನು ಸಂಬಂಧ ಸೂಚಕಾವ್ಯಯ ಎಂದು ಕರೆಯುವರು . ಉದಾ : – ಅಥವಾ , ಆದರೆ , ಮತ್ತು , ಆದ್ದರಿಂದ . * ನಾನು ಬಿಜಾಪುರಕ್ಕೆ ಹೋಗಿದ್ದೆ , ಆದರೆ ಗೋಲಗುಮ್ಮಟ ನೋಡುವುದು ಮರೆತೆ . 15 ಉಷಾ ಬರಲಿಲ್ಲ , ಆದ್ದರಿಂದ ಅನುಶ್ರೀಯೂ ಬರಲಿಲ್ಲ .

 6 ) ಸಂಬೋಧಕಾವ್ಯಯ : ಕರೆಯುವಾಗ ಬಳಸುವ ಶಬ್ದಗಳು ‘ ಸಂಬೋಧಕಾವ್ಯಯಗಳೆನಿಸುವವು . ಉದಾ : ಎಲೋ , ಎಲಾ , ಎಲೆ , ಓ , ಇತ್ಯಾದಿಗಳು

7 ) ಅವಧಾರಣಾರ್ಥಕಾವ್ಯಯ : ಹಲವು ವಸ್ತುಗಳಲ್ಲಿ ಒಂದನ್ನು ನಿಶ್ಚಯಿಸುವುದಕ್ಕೆ ‘ ಅವಧಾರಣೆ ಎಂದು ಹೆಸರು . ಹೀಗೆ ನಿಶ್ಚಿಯಾರ್ಥದಲ್ಲಿ ಬರುವ ಅವ್ಯಯ ಶಬ್ದಗಳು ‘ ಅವಧಾರಣಾರ್ಥ ಕಾವ್ಯಯ ‘ ಎನಿಸುವುವು . ಉದಾ : ನಾನೇ ಅದನ್ನು ಬರೆದನು , ಅವಳೇ ಬರಲಿ . ನೀನೇ ಬಾ . ಅದೇ ನನ್ನ ಪುಸ್ತಕ

8 ) ಪ್ರಶ್ನಾರ್ಥಕಾವ್ಯಯ: ಪ್ರಶ್ನೆ ಕೇಳುವಾಗ ಬಳಸುವ ಅವ್ಯಯಶಬ್ಬಗಳು ‘ ಪ್ರಶ್ನಾರ್ಥಕಾವ್ಯಯ ‘ ಎನಿಸುವವು . ಉದಾ : ಅವನು ಬಂದನೇ ? ಅವರು ಬಂದರೇ ? ಅದು ಏನು ? ಅವಳು ಬಂದಳೋ ಅದು ಏನು ?

 9 )ಕೃದಂತಾವ್ಯಯ & 10 ) ಶಬ್ದದಾಂತ ಅವ್ಯಯ : ನಾಮಪದಗಳ ಮೇಲೆ ಹಲವಾರು ಅರ್ಥದಲ್ಲಿ ಗಾರ , ಕಾರ , ಇಗ ಅಡಿಗ , ವಂತ ಗಿತ್ತಿ ವಳಿ ಆಳಿ ಇತ್ಯಾದಿ ತದ್ಧಿತ ಪ್ರತ್ಯಯಗಳು ಸೇರಿ ತದ್ಧಿತಾಂತಗಳೆನಿಸುವವು ಇವುಗಳಲ್ಲಿ ಮೂರು ವಿಧ ಅವುಗಳೆಂದರೆ

ಕೃದಂತ 

ಮೂಲ ಧಾತುರೂಪಗಳಿಗೆ ಕೃತ್ ಪ್ರತ್ಯಯಗಳು ಸೇರಿ ಕೃದಂತಗಳೆನೆಸುವವು ವಿಶೇಷವಾಗಿ ಇವುಗಳನ್ನು ಕ್ರಿಯಾಪದದ ರೂಪದಲ್ಲಿ ಬಳಸುವುದಕ್ಕಿಂತ ಹೆಚ್ಚಾಗಿ ನಾಮಪದದ ರೂಪದಲ್ಲಿ ಬಳಸಲಾಗುವುದು . ಉದಾ : ಅವನು ಕೆಲಸ ಮಾಡುವನು ಇಲ್ಲಿ ಕ್ರಿಯಾ ರೂಪದಲ್ಲಿದೆ ಧಾತು ಎಂದರೇ ಮೂಲ ಸ್ವರೂಪ ಪದ ಮತ್ತು ಕ್ರಿಯೆಯನ್ನು ಸೂಚಿಸುವ ಮತ್ತು ಪ್ರತ್ಯಯ ರಹಿತವಾದ ಶಬ್ದಗಳು

1 ) ಕೃದಂತ ವಿಶೇಷಣಗಳು – ಒಂದು ಧಾತುವಿಗೆ ಕಾಲವಾಚಕ ಪ್ರತ್ಯಗಳಾದದ , ವ , ಗಳು ಮತ್ತು ನಿಷೇಧಾರ್ಥ “ ಆದ ” ಪ್ರತ್ಯಯಗಳು ಸೇರಿ ಕೃದಂತ ವಿಶೇಷಣಗಾಳಗುತ್ತವೆ

2 ) ಕೃದಂತ ಭಾವನಾಮಗಳು– ಧಾತುಗಳ ಮೇಲೆ ಭಾವಾರ್ಥದಲ್ಲಿ ಕೃತ್ ಪ್ರತ್ಯಯಗಳು ಸೇರಿ ಕೃದಂತ ಭಾವನಾಮಗಳಾಗುತ್ತವ

3) ಕೃದಂತ ಅವ್ಯಯ – ಧಾತುಗಳ ಮೇಲೆ ಉತ , ಉತ್ತ ಆದ , ಆದರೆ , ಅಲಕ್ಕೆ , ಅ , ಇ ಇತ್ಯಾದಿ ಪ್ರತ್ಯಯಗಳು ಸೇರಿ ಕೃದಂತ ಅವ್ಯಯಗಳು ಎನಿಸುವವು

 


0 Comments

Leave a Reply

Avatar placeholder

Your email address will not be published. Required fields are marked *