ಅಲಂಕಾರಗಳು
alankaragalu in kannada,kannada alankaragalu,alankaragalu in kannada grammar,alankaragalu in kannada examples,ಅಲಂಕಾರಗಳು
ಕಾವ್ಯದ ಸೌಂದರ್ಯವನ್ನು ಹೆಚ್ಚಿಸಲು ಮತ್ತು ರಸಮಷ್ಠಿಯನ್ನುಂಟು ಮಾಡಲು ಕವಿಗಳೂ ವಿವಿಧ ಶಬ್ದಾರ್ಥಗಳ ಚಮತ್ಕಾರವನ್ನು ಪ್ರಯೋಗಿಸುತ್ತಾರೆ .
ಶಬ್ದಾರ್ಥ ಚಮತ್ಕಾರದಿಂದ ಕಾವ್ಯದ ಆಂತರಿಕ ಸೌಂದರ್ಯ ಆಕರ್ಷಕವಾಗುವಂತೆ ಮಾಡಿದರೆ , ಶಬ್ದ ಚಮತ್ಕಾರದಿಂದ ಬಾಹ್ಯ ಸೌಂದರ್ಯವನ್ನು ಹೆಚ್ಚಿಸುತ್ತಾರೆ .
ಹೀಗೆ ಕಾವ್ಯಗಳಲ್ಲಿ ಪ್ರಯೋಗವಾಗುವ ಅಲಂಕಾರಗಳನ್ನು ಶಬ್ದಾಲಂಕಾರಗಳು ಮತ್ತು ಅರ್ಥಾಲಂಕಾರಗಳು ಎಂದು ಎರಡು ವಿಧಗಳಾಗಿ ವಿಂಗಡಿಸಲಾಗಿದೆ .ಸಮಾಸಗಳು
-
ಶಬ್ದಾಲಂಕಾರ :
ಶಬ್ದಾಲಂಕಾರಗಳು ಯುವತಿಯರು ಕಾಲಲ್ಲಿ ಧರಿಸುವ ಗೆಜ್ಜೆಗಳಂತೆ . ಅವರು ಹೆಜ್ಜೆಯಿರಿಸಿದಾಗ ಮೂಡುವ ಸದ್ದು ಬೇರೆಯವರ ಗಮನ ಸೆಳೆಯುತ್ತವೆ . ಕಾವ್ಯದಲ್ಲಿ ಶಬ್ದಗಳ ಬೆಡಗು ಈ ಬೆರಗನ್ನುಂಟುಮಾಡುತ್ತವೆ
ಶಬ್ದಾಲಂಕಾರಗಳಲ್ಲಿ ಅನುಪ್ರಾಸ , ಚಿತ್ರಕವಿತ್ವ ಮತ್ತು ಯಮಕ ಗಳೆಂಬ ಮೂರು ವಿಧಗಳಿವೆ .
ಅ ) ಅನುಪ್ರಾಸ : –
ಪದ್ಯಗಳಲ್ಲಿ ಒಂದೋ ಎರಡೋ ಅಕ್ಷರಗಳು ನಿಯತವಾಗಿ ಮತ್ತೆ ಮತ್ತೆ ಬರುವುದನ್ನುಅನುಪ್ರಾಸವೆನ್ನುತ್ತಾರೆ . ಅನುಪ್ರಾಸದಲ್ಲಿ ವೃತ್ಯನುಪ್ರಾಸ ಮತ್ತು ಛೇಕಾನುಪ್ರಾಸ ಎಂದು ಎರಡು ಬಗೆ . ಲಲಿತಾಲವಂಗಲತಾ ಪರಿಶೀಲನ ಕೋಮಲ ಮಲಯ ಸಮೀರ
- ವೃತ್ಯನುಪ್ರಾಸ : –
ಒಂದಾಗಲೀ , ಎರಡಾಗಲೀ ವ್ಯಂಜನಗಳು ಮನಃ ಮನಃ ಬಂದರೆ ಅದನ್ನು ವೃತ್ಯನುಪ್ರಾಸವೆನ್ನುತ್ತಾರೆ .
ಉದಾ : –
1 ) ತುಂಟನಾದವ ಮಂಟಪದಲ್ಲಿ ಕೂತರೂ ತಂಟೆ ಬಿಡಲಾರ
2 ) ಬಲ್ಲವನೆ ಬಲ್ಲ ಬೆಲ್ಲದ ಸವಿಯ
- ಛೇಕಾನುಪ್ರಾಸ : –
ಎರಡೆರಡು ವ್ಯಂಜನಗಳಿಂದ ಕೂಡಿದ ಶಬ್ದದ ಪುನರಾವೃತ್ತಿಯನ್ನು ಛೇಕಾನುಪ್ರಾಸ ಎನ್ನುತ್ತಾರೆ .
ಉದಾ : –
1 ) ಪದ್ಮಗಂಧಿಯ ಪದ್ಮವದನೆಯ ಪದ್ಮ ಸದ ನಿವಾಸನೆಯ ಪದ ಪದ್ಮಕರಪದ್ಮಂಗೊಳೊಪ್ಪುವ ಪದ್ಮಲೋಚನೆಯ
2 ) ಮಾಡಿ ಮಾಡಿ ಕೆಟ್ಟರು ನೀಡಿ ನೀಡಿ ಕೆಟ್ಟರು
ಆ ) ಯಮಕ : –
ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳುಳ್ಳ ಪದ , ಪದಭಾಗ ಪದ್ಯದ ಆದಿ , ಮಧ್ಯ , ಅಂತ ಸ್ಥಾನಗಳಲ್ಲಿ ಎಲ್ಲಾದರೂ ನಿಯತವಾಗಿ ಬಂದಿದ್ದರೆ ಅದನ್ನು ಯಮಕಾಲಂಕಾರವೆನ್ನುತ್ತಾರೆ .
ಉದಾ : – ಎಳೆವಾಸೆ ತೊಡರ್ದುದೆನೆ ಮಿಸು ಪಳೆವಾಸೆಯದೆಸೆಯೆ ನಿಂದಳಂ ಕೈವಿಡಿದೊ ಲೆಳೆವಾಸೆಯಾಂತನಂಬುಜ ದಳೆವಾಸೆಡೆಗೊಂಡ ಪುಳಿನದೆಡೆಗವನೀಶಂ ॥
ಇ ) ಚಿತ್ರಕವಿತ್ವ : –
ಬುದ್ಧಿಸಾಮರ್ಥ್ಯದ ಪ್ರದರ್ಶನಕ್ಕಾಗಿ , ಶಬ್ದಗಳ ಚಮತ್ಕಾರದಿಂದ ಕೂಡಿರುವ ರಚನೆಗಳಿವೆ .
ಏಕಾಕ್ಷರಿ ,
ದ್ವಕ್ಷರಿ ,
ಕ್ಷರಿ ,
ಗತಪ್ರತ್ಯಾಗತ ,
ಆತಾಲವ್ಯ ,
ನಿರೋಷ್ಟ್ರ ಮುಂತಾದ ಭೇದಗಳು ಚಿತ್ರಕವಿತ್ವದಲ್ಲಿವೆ .
ಉದಾ : – ನನ್ನನ ನನ್ದನ ನಿನ್ನೊ ಸ್ಪನ್ನದ ಮೈಮುನ್ನೆ ನಿನ್ನುದೆನ್ನೆನೆ ಮುದದಿ ನಷ್ಟುನ್ನೆನ್ನದೆ ನೀ ನೆನ್ನುಂ ಮನನದೆ ನೆಮ್ಮೆನಿಮುದಮಂ
2.ಅರ್ಥಾಲಂಕಾರ :
ಅರ್ಥಾಲಂಕಾರಗಳಿಂದ ಕಾವ್ಯದಲ್ಲಿ ಅರ್ಥ ಚಮತ್ಕಾರ ತೋರಿ ,
ಸೌಂದರ್ಯ ಹೆಚ್ಚಿ ,
ರಸಾನುಭೂತಿಯಾಗುತ್ತದೆ
ಉದಾ : – ” ರಣರಂಗದಿಂದ ಹಿಂದಿರುಗಿದ ಪತಿಯನ್ನು ಕಂಡ ಆಕೆಯ ಮುಖ ಸೂರ್ಯೋದಯವಾದೊಡನೆ ಅರಳುವ ಕಮಲದಂತೆ ಅರಳಿತು.
ಅ) ಉಪಮಾಲಂಕಾರ :
ಎರಡು ವಸ್ತುಗಳಲ್ಲಿ ಪರಸ್ಪರ ಇರುವ ಹೋಲಿಕೆಯನ್ನು ವರ್ಣಿಸುವುದೇ ಉಪಮಾಲಂಕಾರವೆನಿಸುತ್ತದೆ .
ನಾಲ್ಕು ಅಂಶಗಳೂ ಇರುವ ಅಲಂಕಾರವನ್ನು ಪೂರ್ಣೋಪಮಾಲಂಕಾರವೆನ ುತ್ತಾರೆ
ಉಪಮೇಯ : – ಹೋಲಿಕೆಗೆ ಗುರಿಯಾಗುವ ವಸ್ತು
ಉಪಮಾನ : – ಹೋಲಿಸಿರುವ ವಸ್ತು
ಸಾಧಾರಣಧರ್ಮ : – ಉಪಮಾನ , ಉಪಮೇಯ ಗಳೆರಡರಲ್ಲೂ ಕಾಣುವ ಸಮಾನಧರ್ಮ ,
ಉಪಮಾವಾಚಕ : – ಅಂತೆ , ಅಂತೆವೋಲ್ , ವೊಲ್ , ರೀತಿ , ಹಾಗೆ – ಇತ್ಯಾದಿ ಶಬ್ದಗಳು .
ಉದಾ : – ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರೆದಂತೆ
ಉಪಮೇಯ : – ನೀಚರಿಗೆ ಮಾಡಿದ ಉಪಕಾರ ( ನೀಚ )
ಉಪಮಾನ : – ಹಾವಿಗೆ ಹಾಲೆರೆದಂತೆ ( ಹಾವು )
ಸಾಧಾರಣಧರ್ಮ : – ಹಾವಿನಲ್ಲಿರುವ ವಿಷ ನೀಚರು ಮಾಡುವ ಅಪಕಾರ ,
ಉಪಮಾವಾಚಕ : – ಹಾಲೆರೆದಂತೆ ಎನ್ನುವಲ್ಲಿ ಇರುವ ” ಅಂತೆ ” ಶಬ್ದ , ಇದು ಪೂರ್ಣೋಪಮಾಲಂಕಾರ
ಉದಾ : –
1 ) ಅಳುವ ಕಂದನ ತುಟಿಯು ಹವಳದ ಕುಡಿಯಂಗ
2 ) ಸಂಗೀತಾ ಕೋಗಿಲೆಯಂತೆ ಹಾಡುತ್ತಾಳೆ 3 ) ಕವಿತಾಳು ಜಿಂಕೆಯಂತೆ ಓಡುತ್ತಾಳೆ
ಆ ) ರೂಪಕಾಲಂಕಾರ :
ಉಪಮಾನ ಉಪಮೇಯಗಳೆರಡೂ ಹೋಲಿಕೆಗೆ ಗುರಿಯಾಗುವ ಮತ್ತು ಹೋಲಿಸುವ ವಸ್ತು ಒಂದೇ ಎಂದು ಹೇಳಿದರೆ ರೂಪಕಾಲಂಕಾರ ವಾಗುವುದು .
ಉದಾ :
ಪುರದ ಪುಣ್ಯಂ ಪುರುಷ ರೂಪಿಂದೆ ಹೋಗುತಿದೆ .
ಪರಿಜನದ ಭಾಗ್ಯವಡವಿಗೆ ನಡೆಯುತಿದೆ ಪುರದ ಮಣ್ಯವೇ ಆದ ಹರಿಶ್ಚಂದ್ರ ,
ಸೇವಕರ ಅದೃಷ್ಟವೇ ಆದ ಹರಿಶ್ಚಂದ್ರ ಕಾಡಿಗೆ ತೆರಳುತ್ತಿದ್ದಾನೆ . ಇಲ್ಲಿ ಉಪಮೇಯ – ಹರಿಶ್ಚಂದ್ರ
ಉಪಮಾನ –
ಪುರದ ಪುಣ್ಯ , ಪರಿಜನದ ಭಾಗ್ಯ ಹರಿಶ್ಚಂದ್ರನೇ ಪುರದ ಪುಣ್ಯ , ಪರಿಜನದ ಭಾಗ್ಯವೆಂದು ಉಪಮೇಯ ಉಪಮಾನಗಳೆರಡೂ ಒಂದೇ ಎಂದು ವರ್ಣಿಸಿರುವುದರಿಂದ ಇದು ರೂಪಕಾಲಂಕಾರವಾಗಿದೆ .
ಉದಾ : –
1 ) ಅವಳು ಸಾಕ್ಷಾತ್ ಸರಸ್ವತಿ
2 ) ಮನೆಯೇ ಮಂತ್ರಾಲಯ
3 ) ಅವನು ಕಲ್ಲೆದೆಯ ಮನುಷ್ಯ
4 ) ನಮ್ಮ ಮನೆಯೇ ಮಂತ್ರಾಲಯ
5 ) ಅವಳು ಚಂದ್ರಮುಖಿ
6 ) ಅವಳು ಕಮಲಮುಖಿ
ಇ ) ಉತ್ತೇಕ್ಷಾಲಂಕಾರ :
ಒಂದು ಪದಾರ್ಥವನ್ನು ಅಥವಾ ಸನ್ನಿವೇಶವನ್ನು ಬೇರೊಂದನ್ನಾಗಿ ಸಂಭಾವಿಸಿ ( ಕಲ್ಪಿಸಿ ) ವರ್ಣಿಸಿದರೆ ಉಪ್ಪೇಕ್ಷಾಲಂಕಾರ ವಾಗುವುದು
( ಹಾಗೆ ಸಂಭಾವಿಸುವಾಗ ಪದಾರ್ಥ ಸನ್ನಿವೇಶದ ಧರ್ಮ ಅಥವಾ ಸಂಭಾವಿಸುವುದರಲ್ಲಿರಬೇಕು )
ಉದಾ : – ಆ ಸೇನಾರ ದಿಂದ ಮು ಧೂಸರಮಾದುದು ನಿಜಾಂಗಮಂತೊಳೆಯಲೈಂ । ದೋಸರಿಸದೆ ಸೊಕ್ಕಂತಿರೆ ವಾಸರಕರನಪರವಾರಿನಿಧಿಯಂ ಪೊಕ್ಕಂ ॥
ಸೇನೆಯ ಕಾಲ್ತುಳಿತದಿಂದ ಎದ್ದ ಧೂಳಿನಿಂದ ಕೆಂಪಾದ ಮೈಯನ್ನು ತೊಳೆದುಕೊಳ್ಳಲೋ ಎಂಬಂತೆ ಸೂರ್ಯನು ಪಶ್ಚಿಮ ಸಾಗರದಲ್ಲಿ ಮುಳುಗಿದನು .
ಸೂರ್ಯನು ಸಂಜೆಯಲ್ಲಿ ಮುಳುಗುವುದು ಸಹಜ , ಆಗ ಅವನು ಕೆಂಪಗೆ ಕಾಣುತ್ತಾನೆ . ಸೇನೆಯ ಕಾಲ್ತುಳಿತದಿಂದ ಎದ್ದ ಧೂಳು ಸೂರ್ಯನಿಗೆ ಮುತ್ತಿ ಅವನ ಮೈ ಕೆಂಪಾಯಿತು .
ಅದನ್ನು ತೊಳೆಯಲು ಅವನು ಸಮುದ್ರದಲ್ಲಿ ಮುಳುಗಿದೆ ಎಂದು ಕಲಿಸಿ ಹೇಳಿರುವುದರಿಂದ ಉತ್ತೇಕ್ಷಾಲಂಕಾರವಾಗಿದೆ .
ಉದಾ : ಆ ಯುದ್ಧವನ್ನು ನೋಡಲು ದಿನಪನು ಉದಯಿಸಿ ಬಂದ ಶಿವರಾಮ ಕಾರಂತರು ಮಾತನಾಡಲು ತೊಡಗಿದರೆ ಒಂದು ಗ್ರಂಥಾಲಯಕ್ಕೆ ಬಾಯಿ ಬಂದಂತೆ
ಗಾಂಧೀಜಿ ಸತ್ತಾಗ ದೇಶಕ್ಕೆ ದೇಶವೇ ಕಣ್ಣೀರಿಟ್ಟಿತು
ಮೈಸೂರಿನ ದಸರಾವನ್ನು ನೋಡಲು ಊರಿಗೆ ಊರೇ ಬಂದಿತ್ತು .
ಆ ಯುದ್ಧವನ್ನು ನೋಡಿದ ದಿನಪ ಈತನಿರದ ನಾಡಲ್ಲಿ ತನಗೆ ಏನೆಂದು ಜಾರಿದನು
ಈ ) ಅರ್ಧಾಂತರ ನ್ಯಾಸಾಲಂಕಾರ :
ಸಾಮಾನ್ಯಾರ್ಥದಿಂದ ವಿಶೇಷಾರ್ಥವನ್ನು ಅಥವಾ ವಿಶೇಷಾರ್ಥದಿಂದ ಸಾಮಾನ್ಯರ್ಥವನ್ನು ಸಮರ್ಥಿಸಿದರೆ ಅರ್ಥಾಂತರ ನ್ಯಾಸಾಲಂಕಾರವಾಗುವುದು .
ಉದಾ : –
ಆತನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತೀರ್ಣನಾದನು .
ಬುದ್ಧಿವಂತರಾದ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೆ ?
ಇಲ್ಲಿ ‘ ಆತನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತೀರ್ಣನಾದನು ‘ ಎನ್ನುವುದು ವಿಶೇಷಾರ್ಥದ ವಾಕ್ಯ ಅದನ್ನು ‘ ಬುದ್ಧಿವಂತರಾದ ಮಕ್ಕಳಿಗೆ ಪರೀ ಕೈಯೊಂದು ಲೆಕ್ಕವೆ ? ಎನ್ನುವ ಸಾಮಾನ್ಯರ್ಥದ ವಾಕ್ಯದಿಂದ ಸಮರ್ಥಿಸಲಾಗಿದೆ . ಹೀಗಾಗಿ ಇದನ್ನು ಅರ್ಥಾಂತರ ನ್ಯಾಸಾಲಂಕಾರ ಎನ್ನುತ್ತಾರೆ .
ಉದಾ : – ಭಗವಂತನು ತನ್ನ ಭಕ್ತರನ್ನು ಎಂದೂ ಕೈ ಬಿಡುವುದಿಲ್ಲ , ಆದರೆ ಭಕ್ತ ಪ್ರಹ್ಲಾದನು ಶ್ರೀಹರಿ ಕಾಪಾಡಲಿಲ್ಲವೇ ? ಶ್ರೀರಾಮನು ಸೀತಾದೇವಿಯನ್ನು ಅಗ್ನಿ ಪ್ರವೇಶಕ್ಕೆ ಒಳಪಡಿಸಿದಾಗ ಅಗ್ನಿ ದೇವನು ಕಾಪಾಡಿದನು .
ಉ ) ದೃಷ್ಟಾಂತಾಲಂಕಾರ :
ಎರಡು ಬೇರೆ ಬೇರೆ ವಾಕ್ಯಗಳು ಅರ್ಥ ಸಾದೃಶ್ಯದಿಂದ ಪ್ರತಿಬಿಂಬ ಮತ್ತೊಂದೆಂದು ತೋರಿದರೆ ದೃಷ್ಟಾಂತಾಲಂಕಾರವೆನಿಸುತ್ತದೆ . ಒಂದರ
ಉದಾ : – ಅಟ್ಟ ಮೇಲೆ ಒಲೆ ಉರಿಯಿತು . ಕೆಟ್ಟ ಮೇಲೆ ಬುದ್ದಿ ಬಂತು .
ಅಡಿಗೆಯಾದ ಮೇಲೆ ಒಲೆ ಉರಿದರೆ , ಹಾಳಾದ ಮೇಲೆ ಬುದ್ದಿ ಬಂದರೆ ಏನು ಉಪಯೋಗ ಎರಡೂ ವ್ಯರ್ಥವೇ . ಹೀಗೆ ಈ ಎರಡು ವಾಕ್ಯಗಳಲ್ಲಿ ಅರ್ಥದ ಹೋಲಿಕೆಯಿಂದ ಬಿಂಬ ಪ್ರತಿಬಿಂಬ ಭಾವವಿದೆ . ಆದ್ದರಿಂದ ಇದನ್ನು ದೃಷ್ಟಾಂತಾಲಂಕಾರದ ಉದಾಹರಣೆಯೆನ್ನಲಾಗಿದೆ .
ಉದಾ : –
1 ) ಮಾತು ಬೆಳ್ಳಿ ಮೌನ ಬಂಗಾರ
2 ) ಉಪ್ಪಿಗಿಂತ ರುಚಿಯಿಲ್ಲ , ತಾಯಿಗಿಂತ ಬಂಧುವಿಲ್ಲ . ಇಂದಿನ ಮಕ್ಕಳೇ ನಾಳಿನ ಪ್ರಜೆಗಳು
3 ) ಮಾತು ಬಲ್ಲವನಿಗೆ ಜಗಳವಿಲ್ಲ , ಊಟ ಬಲ್ಲವನಿಗೆ ರೋಗವಿಲ್ಲ
4 ) ನೂಲಿನಂತೆ ಸೇರೆ ತಾಯಿಯಂತೆ ಮಗಳು
ಊ ) ಶ್ಲೇಷಾಲಂಕಾರ :
ಉಪಮೇಯ ಮತ್ತು ಉಪಮಾನ ಪರವಾದ ಒಂದೇ ಬಗೆ ಯ ಶಬ್ದರೂಪದ ವಾಕ್ಯಗಳು ಬೇರೆ ಬೇರೆ ಅರ್ಥಗಳನ್ನು ಕೊಡುವಂತಿದ್ದರೆ ಪ್ಲೇಷಾಲಂಕಾರವೆನಿಸುತ್ತದೆ .
ಉದಾ : – ಆ ವಿವಾಹ ಮಂಟಪವು ಪುರಂದರರದಂತೆ ಸದಾರಂಧಾನ್ವಿತವಿಬುಧಮಿಳಿತವಾಗಿತ್ತು
( ಶ್ಲೇಷಾರ್ಥ : ರಂಭಾ = ಬಾಳೆ ,
ರಂಭೆಯೆಂಬ ಅಪ್ಸರೆ ;
ವಿಬುಧ = ಬ್ರಾಹ್ಮಣ , ದೇವತೆ ).
ಇಲ್ಲಿ ರಂಭಾ ಮತ್ತು ವಿಬುಧ ಶಬ್ದಗಳು ಶೇಷಾರ್ಥ ( ಬೇರೆ ಬೇರೆ ಅರ್ಥ ) ಗಳನ್ನು ಹೊಂದಿ ವಿವಾಹ ಮಂಟಪ ಮತ್ತು ಅಮರಾವತಿಗಳನ್ನು ವರ್ಣಿಸುತ್ತಿವೆ . ಹೀಗಾಗಿ ಇಲ್ಲಿ ಶ್ಲೇಷಾಲಂಕಾರವಿದೆ .
0 Comments