ಅಮರಾವತಿ । amaravathi Andhra Capital। Current Affairs

Amarawati Andhra Capital

Amarawati Andhra Capital , ಅಮರಾವತಿ , Amaravathi Tourism , Tribunal Reforms Act of 2021 , Amaravathi , amaravati stupa

Amarawati Andhra Capital , ಅಮರಾವತಿ , Amaravathi Tourism , Tribunal Reforms Act of 2021 , Amaravathi , amaravati stupa
ನೂತನ ನಗರ ಅಮರಾವತಿಯೇ ಆಂಧ್ರ ಪ್ರದೇಶದ ರಾಜಧಾನಿ -ಆಂಧ್ರ ಹೈಕೋರ್ಟ್  ಅಂತಿಮ ತೀರ್ಪು
ನೂತನ ನಗರವಾಗಿ ನಿರ್ಮಾಣವಾಗಲಿರುವ ಅಮರಾವತಿಯೇ (Amarawati) ಆಂಧ್ರ ಪ್ರದೇಶದ ರಾಜಧಾನಿ. ಇದೇ ಅಂತಿಮ ಎಂದು ಆಂಧ್ರ ಹೈಕೋರ್ಟ್  ತನ್ನ ಅಂತಿಮ ತೀರ್ಪು ಪ್ರಕಟಿಸಿದೆ.
ಆದರೆ ಆಂಧ್ರ ಪ್ರದೇಶದ ಹಾಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ (YS Jagan Mohan Reddy) ಮೂರು ರಾಜಧಾನಿಗಳನ್ನು ಹೊಂದುವ ಆಶಯವಿತ್ತು. ಅಮರಾವತಿ ಶಾಸಕಾಂಗ ರಾಜಧಾನಿ (Legislative Capital), ವಿಶಾಖಪಟ್ಟಣಂ ಕಾರ್ಯಾಂಗ ರಾಜಧಾನಿ (Executive) ಮತ್ತು ಕರ್ನೂಲ್ ನ್ಯಾಯಾಂಗ (Judiciary) ರಾಜಧಾನಿ ಆಗಬೇಕೆಂದು ರಾಜ್ಯ ಸರ್ಕಾರ ಬಯಸಿತ್ತು. ಒಂದು ರಾಜ್ಯಕ್ಕೆ ಮೂರು ರಾಜಧಾನಿಗಳಿರಲು ಸಾಧ್ಯವಿಲ್ಲ ಎಂದು ಆಂಧ್ರ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಆಂಧ್ರಪ್ರದೇಶ ರಾಜಧಾನಿ ವಿಚಾರದಲ್ಲಿ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಇತಿಶ್ರೀ ಹಾಡಿದೆ. ಅಮರಾವತಿಯೇ ರಾಜಧಾನಿಯಾಗಿರಲಿದೆ ಎಂದು ತೀರ್ಪು ನೀಡಿದೆ (Amarawati Andhra Pradesh Capital City).

ನ್ಯಾಯಮಂಡಳಿ ಸುಧಾರಣೆಗಳ ಕಾಯ್ದೆ, 2021:

 ಸಂದರ್ಭ:
ಇತ್ತೀಚಿಗೆ, ಪ್ರಮುಖ ನ್ಯಾಯಮಂಡಳಿಗಳಿಗೆ ಸಂಬಂಧಿಸಿದಂತೆ ಕಾನೂನನ್ನು ಜಾರಿಗೊಳಿಸುವ ಸರ್ಕಾರದ ನಿರ್ಧಾರವು -ಅದೂ ಸಹ ನ್ಯಾಯಾಲಯವು ಮತ್ತೊಂದು ಅಂತಹುದೇ ಕಾನೂನನ್ನು ರದ್ದುಗೊಳಿಸಿದ ಕೆಲವು ದಿನಗಳ ನಂತರ-ಕೋರ್ಟ್ನ ತೀರ್ಪನ್ನು ಅವಮಾನಿಸಿದಂತಾಗಿದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.

ಏನಿದು ವಿವಾದ?

ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೆ ತಂದ ‘ನ್ಯಾಯಮಂಡಳಿ ಸುಧಾರಣೆಗಳ ಕಾಯ್ದೆ’, 2021 (Tribunal Reforms Act of 2021) ಅನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.
ಪ್ರಮುಖ ನ್ಯಾಯಮಂಡಳಿಗಳ ಸದಸ್ಯರ ನೇಮಕಾತಿಗಳು, ಸೇವಾ ಷರತ್ತುಗಳು, ವೇತನಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಕಾಯಿದೆಯು ಸರ್ಕಾರಕ್ಕೆ ವ್ಯಾಪಕ ಅಧಿಕಾರವನ್ನು ನೀಡುತ್ತದೆ, ಇದರಿಂದಾಗಿ ‘ನ್ಯಾಯಾಂಗ ಸ್ವಾತಂತ್ರ್ಯ’ಕ್ಕೆ ಗಂಭೀರ ಅಪಾಯವುಂಟಾಗುತ್ತದೆ ಎಂದು ಅರ್ಜಿದಾರರು ವಾದಿಸುತ್ತಾರೆ.
2021 ರಲ್ಲಿ ಪ್ರಕಟಿಸಲಾದ ನ್ಯಾಯಮಂಡಳಿ ಸುಧಾರಣೆಗಳು (ತಾರ್ಕಿಕಿಕರಣ ಮತ್ತು ಸೇವಾ ಷರತ್ತುಗಳು) ಸುಗ್ರೀವಾಜ್ಞೆಯನ್ನು  (Tribunals Reforms (Rationalisation and Conditions of Service), Ordinance) ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಕೆಲವೇ ದಿನಗಳಲ್ಲಿ ಲೋಕಸಭೆಯಲ್ಲಿ ಈ ಕಾಯ್ದೆಯನ್ನು ಪರಿಚಯಿಸಲಾಯಿತು ಎಂದು ಅರ್ಜಿದಾರರು ಹೇಳುತ್ತಾರೆ. ಈ ಕಾಯಿದೆಯು ಸುಪ್ರಿಂ ಕೋರ್ಟ್‌ ಅಸಿಂಧು ಗೊಳಿಸಿದ ಸುಗ್ರೀವಾಜ್ಞೆಯ ಅದೇ ನಿಬಂಧನೆಗಳನ್ನು ಮರಳಿ ತಂದಿತು.

Comments

Leave a Reply

Your email address will not be published. Required fields are marked *