ಅಟಾರ್ನಿ ಜನರಲ್ ಆಫ್ ಇಂಡಿಯಾ । Attorney General of India

ಪರಿವಿಡಿ

ಅಟಾರ್ನಿ ಜನರಲ್ ಆಫ್ ಇಂಡಿಯಾ

Attorney General of India

Attorney General of India , attorney general of india , present attorney general of india, advocate general of india, ಅಟಾರ್ನಿ ಜನರಲ್

Attorney General of India , attorney general of india , present attorney general of india, advocate general of india, ಅಟಾರ್ನಿ ಜನರಲ್

76 ನೇ ವಿಧಿ ಅನ್ವಯ ಭಾರತದ ಸಂವಿಧಾನವು ಅಟಾರ್ನಿ ಜನರಲ್ ಹುದ್ದೆಯನ್ನು ಒದಗಿಸಿದೆ , ಭಾರತದಲ್ಲ ಅಟಾರ್ನಿ ಜನರಲ್‌ರವರು ಭಾರತ ಸರ್ಕಾರ ಪ್ರಪ್ರಥಮ ಅಥವಾ ಅತ್ಯುನ್ನತ ಕಾನೂನು ಅಧಿಕಾರಿಯಾದ ಅಟಾರ್ನಿ ಜನರಲ್ ಬಗ್ಗೆ ಸಂವಿಧಾನದ 5 ನೇ ಭಾಗದಲ್ಲಿ ಹೇಳಲಾಗಿದೆ .

 

 ಭಾರತದ ಅಟಾರ್ನಿ ಜನರಲ್ ಟಾರ್ನಿ ಜನರಲ್‌ ನೇಮಕ

( Appointment )

ಅಟಾರ್ನಿ ಜನರಲ್‌ರವರನ್ನು ಭಾರತದ ರಾಷ್ಟ್ರಪತಿಗಳ 76 ( 1 ) ನೇ ಅನ್ವಯ ಸಂವಿಧಾನದ ನೇಮಕ ಮಾಡುತ್ತಾರೆ .

ಅರ್ಹತೆ ( Qualification )

ಭಾರತದ ಅಟಾರ್ನಿ ಜನರಲ್ ಆಗಿ ನೇಮಕ ಮಾಡುವಾಗ ಅನೇಕ ಅರ್ಹತೆಗಳನ್ನು ಹೊಂದಿರಬೇಕು ಅಂತಹ ಅರ್ಹತೆಗಳನ್ನು ಒಳಗೊಂಡವರನ್ನು ರಾಷ್ಟ್ರಪತಿಯವರು ನೇಮಕ ಮಾಡುತ್ತಾರೆ .

1 ) ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗುವ ಅರ್ಹತೆ ಹೊಂದಿರಬೇಕು .

2 ) ಭಾರತೀಯ ಪ್ರಜೆಯಾಗಿದ್ದು , ಭಾರತದ ಯಾವುದಾದರೂ ಹೈಕೋರ್ಟಿನಲ್ಲಿ ನ್ಯಾಯವಾದಿ ಕಾರ್ಯ ನಿರ್ವಹಿಸಿರಬೇಕು , ಅಥವಾ ರಾಷ್ಟ್ರಪತಿಗಳ ದೃಷ್ಟಿಯಲ್ಲಿ ಪರಿಣಿತ ನ್ಯಾಯಾಧೀಶರೆಂಬ ಅಭಿಪ್ರಾಯ ಹೊಂದಿರಬೇಕು .

 ಅಧಿಕಾರವಧಿ ( Term )

ಭಾರತದ ಅಟಾರ್ನಿ ಜನರಲ್‌ರವರ ಅಧಿಕಾರವಧಿಯು ಇರುವವರೆಗೆ ಇಚ್ಛೆ ಮುಂದುವರಿಯುತ್ತದೆ . ಭಾರತದ ಸಂವಿಧಾನದಲ್ಲಿ ಅಟಾರ್ನಿ ಜನರಲ್‌ರವರ ಅಧಿಕಾರವಧಿಯನ್ನು ನಿರ್ದಿಷ್ಟವಾಗಿ ಸೂಚಿಸಿಲ್ಲ .

ಮೊದಲ ಆಟಾರ್ನಿ ಜನರಲ್ ಸೆಟಲ್ ವಾಡ್‌ರವರು ( 1950-63 ) ರವರೆಗೆ ಅಂದರೆ 13 ವರ್ಷ ಅಟಾರ್ನಿ ಜನರಲಾಗಿ ಕಾರ್ಯನಿರ್ವಹಿಸಿದ್ದಾರೆ . ಸಿ.ಕೆ.ದಪಾರಿರವರು ಕೇವಲ ಏಳು ತಿಂಗಳ ಕಾಲ ಕಾರ್ಯನಿರ್ವಹಿಸಿದ್ದಾರೆ . ಮೂಲಕ ಅಟಾರ್ನಿ ಜನರಲ್ ಹುದ್ದೆಗೆ ನಿಗದಿತವಾದ ಅಧಿಕಾರಾವಧಿಯು ಇರುವುದಿಲ್ಲ .

ಕಾರ್ಯಗಳು ಹಾಗೂ ಜವಬ್ದಾರಿಗಳು

( Duties and Function )

ಭಾರತದ ಮುಖ್ಯ ಕಾನೂನು ಅಧಿಕಾರಿಯಾದ ಅಟಾರ್ನಿ ಜನರಲ್‌ರವರು 76 ( 2 ) ವಿಧಿ ಅನ್ವಯ ಕೆಳಗಿನ ಕರ್ತವ್ಯಗಳನ್ನು ಹೊಂದಿದ್ದಾರೆ .

1 ) ಭಾರತ ಸರ್ಕಾರಕ್ಕೆ ರಾಷ್ಟ್ರಪತಿಗಳು ಸೂಚಿಸಿದ ಕಾನೂನು ವಿಷಯಗಳಿಗೆ ಸಂಬಂಧಿಸಿದಂತೆ ಸಲಹೆ ನೀಡುತ್ತಾರೆ . ಸೂಚಿಸಿದ ಕಾರ್ಯಗಳನ್ನು ಮಾಡುತ್ತಾರೆ .

2 ) ರಾಷ್ಟ್ರಪತಿ ಕಾನೂನಿಗೆ ಸಂಬಂಧಿಸಿದ

3 ) ಭಾರತದ ಸಂವಿಧಾನದಲ್ಲಿ ಸೂಚಿಸಿರುವ ಹಾಗೂ ಇತರೆ ಕಾನೂನುಗಳಲ್ಲಿ ಸೂಚಿಸಿರುವ ಕಾರ್ಯಗಳನ್ನು ನಿರ್ವಹಿಸುತ್ತಾರೆ .

4 ) ರಾಷ್ಟ್ರಪತಿಗಳು ಅಟಾರ್ನಿ ಜನರಲ್‌ರವರಿಗೆ ವಹಿಸಿದ ಕಾರ್ಯಗಳು .

5 ) ಭಾರತ ಸರ್ಕಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನ ಎಲ್ಲಾ ಮೊಕದ್ದಮೆಗಳಲ್ಲೂ ಭಾಗವಹಿಸಬೇಕು .

6 ) 143 ನೇ ವಿಧಿ ಅನ್ವಯ ಭಾರತದ ರಾಷ್ಟ್ರಪತಿಯು ಸುಪ್ರಿಂಕೋರ್ಟಿನ ಸಲಹೆ ಪಡೆಯುವಾಗ ಭಾರತ | ಸರ್ಕಾರವನ್ನು ಪ್ರತಿನಿಧಿಸಬೇಕು

7 ) ಭಾರತ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಮೊಕದ್ದಮೆಗೆ ಸಂಬಂಧಿಸಿದಂತೆ ಅಗತ್ಯವೆನಿಸಿದರೆ ಭಾರತದ ಯಾವುದೇ ಹೈಕೋರ್ಟಿನಲ್ಲಿ ಭಾರತ ಸರ್ಕಾರವನ್ನು ಪ್ರತಿನಿಧಿಸಬೇಕು .

 

ಹುದ್ದೆಯಿಂದ ತೆಗೆಯಬಹುದು .

ಇವರು ಸರ್ಕಾರ ರಾಜೀನಾಮೆ ನೀಡಿದಾಗ ಅಥವಾ ವಿಸರ್ಜನೆಯಾದಾಗ ಇವರು ರಾಜಿನಾಮೆ ನೀಡುತ್ತಾರೆ . ಇವರು ಸರ್ಕಾರದ ಸಲಹೆ ಮೇರೆಗೆ ನೇಮಕವಾಗಿರುತ್ತಾರೆ . ಸೇವನ : ಭಾರತ ಸಂವಿಧಾನದಲ್ಲಿ ಆಟಾರ್ನಿ ಜನರಲ್‌ರವರ ವೇತನವನ್ನು ನಮೂದಿಸಿಲ್ಲ . ಇವರು ರಾಷ್ಟ್ರಪತಿಯವರು ನಿರ್ಧರಿಸಿದ ವೇತನವನ್ನು ಪಡೆಯುತ್ತಾರೆ .

ಜಟಾರ್ನಿ ಜನರಲ್‌ರವರ ಹಕ್ಕುಗಳು :

ಭಾರತದ ಸಂವಿಧಾನ 76 ( 3 ) ನೇ ವಿಧಿಯು ಭಾರತದ ಒಕ್ಕೂಟದ ಯಾವುದೇ ನ್ಯಾಯಾಲಯದಲ್ಲಿ ವೀಕ್ಷಕರಾಗಿ ಭಾಗವಹಿಸಬಹುದು ಎಂದು ತಿಳಿಸುತ್ತದೆ .

 ಅಟಾರ್ನಿ ಜನರಲ್‌ರವರ ವಿಶೇಷ ಸವಲತ್ತುಗಳು

ವಿಧಿ .88 . ಸದನಗಳ ಸಂಬಂಧದಲ್ಲಿ ಮಂತ್ರಿಗಳ ಮತ್ತು ಅಟಾರ್ನಿ ಜನರಲ್‌ನ ಹಕ್ಕುಗಳು ಅಟಾರ್ನಿ ಜನರಲ್‌ರವರು ಸಂಸತ್ತಿನ ಸದಸ್ಯರಲ್ಲ ದಿದ್ದರೂ ಸಂಸತ್ತಿನ ಎರಡು ಸದನಗಳ ಅಥವಾ ಜಂಟಿ ಸದನದಲ್ಲಿ ಕಾರ್ಯ ಕಲಾಪಗಳಲ್ಲಿ ಭಾಗವಹಿಸಬಹುದು . ಮಾತನಾಡಬಹುದು ಹಾಗೂ ಸಂಸತ್ತಿನ ಯಾವುದೇ ಸಮಿತಿಯಲ್ಲಿ ಸದಸ್ಯರಾಗಬಹುದು ಆದರೆ ಯಾವುದೇ ನಿರ್ಣಯಕ್ಕೆ ಸಂಬಂಧಿಸಿದಂತೆ ಮತದಾನ ಮಾಡುವ ಹಕ್ಕು ಹೊಂದಿಲ್ಲ .

 ಅಟಾರ್ನಿ ಜನರಲ್ ಒದಗಿಸಿರುವ ಸವಲತ್ತುಗಳು

ಅಟಾರ್ನಿ ಜನರಲ್‌ರವರು ಒಬ್ಬ ಸಂಸತ್ ಸದಸ್ಯನು ಪಡೆಯುವ ಎಲ್ಲಾ ವಿಧದ ಸವಲತ್ತುಗಳನ್ನು ಪಡೆ ಯುತ್ತಾರೆ ( ವಿಧಿ 105 ( 4 ) ತಿಳಿಸುತ್ತದೆ .

ಭಾರತದ ಸಾಅಸಿಟರ್ ಜನರಲ್ ( Solicitor General of India )

ಭಾರತ ದೇಶದಲ್ಲಿ ಅಟಾರ್ನಿ ಜನರಲ್‌ರವರ ಕೆಲಸದ ಒತ್ತಡ ಕಡಿಮೆ ಮಾಡಲು ಹಾಗೂ 4 ಮಂದಿ ಅವರ ಸಾಲಿಸಿಟರ್ ಅಟಾರ್ನಿ ಜನರಲ್‌ರವರಿಗೆ ಸಹಾಯ ಮಾಡಲು ಸಾಲಿಸಿಟರ್ ಜನರಲ್‌ರವರನ್ನು ನೇಮಕ ಮಾಡಿಕೊಳ್ಳುತ್ತಾರೆ . ಸಾಲಿಸಿಟ‌ ಜನರಲ್‌ರವರು ಭಾರತದ ಎರಡನೇ ಉನ್ನತ ಕಾನೂನು ಅಧಿಕಾರಿ , ಇವರು ಭಾರತ ಸರ್ಕಾರಕ್ಕೆ ನೀಡುವುದಿಲ್ಲ , ಬದಲಿಗೆ ಯಾವುದೇ ಸಲಹೆ ಅಟಾರ್ನಿ ಜನರಲ್‌ರವರ ಅಧಿಕೃತ ಕೆಲಸ ಒತ್ತಡ ಕಡಿಮೆ ಮಾಡಲು ಭಾರತ ಒಕ್ಕೂಟದ ಪರವಾಗಿ ನ್ಯಾಯಾಲಯಗಳಲ್ಲಿ ಭಾಗವಹಿಸುತ್ತಾರೆ . ಸಾಲಿಸಿಟರ್‌ರವರ ಸಹಾಯಕರಾಗಿ ನಾಲ್ಕು ಮಂದಿ ಅಡಿಷನಲ್ ಸಾಲಿಸಿಟರ್ ಜನರಲ್ ರನ್ನು ನೇಮಕ ಮಾಡುತ್ತಾರೆ .

ಭಾರತದ ಸಂವಿಧಾನದ 76 ನೇ ವಿಧಿಯಲ್ಲಿ ಸಾಲಿಸಿಟ‌ ಜನರಲ್ ಹಾಗೂ ಆಡಿಷನಲ್ ಸಾಲಿಸಿಟರ್ ಜನರಲ್ ಬಗ್ಗೆ ನಮೂದಿಸಿಲ್ಲ . ಸಂವಿಧಾನದ 76 ನೇ ( 1 ) ( 2 ) ( 3 ) ( 4 ) ವಿಧಿಯಲ್ಲಿ ಅಟಾರ್ನಿ ಜನರಲ್ ಕಛೇರಿ ಬಗ್ಗೆ ಮಾತ್ರ ತಿಳಿಸಲಾಗಿದೆ .

 ವಿವಿಧ ದೇಶಗಳಲ್ಲಿ ಅಟಾರ್ನಿ ಜನರಲ್

ಆಸ್ಟ್ರೇಲಿಯಾದಲ್ಲಿ ಆಟಾರ್ನಿ ಜನರಲ್‌ರವರು ರಾಣಿಯ ಮುಖ್ಯ ಕಾನೂನು ಅಧಿಕಾರಿ ಹಾಗೂ ಕ್ಯಾಜಿನೇಟ್‌ನ ಸದಸ್ಯರಾಗಿದ್ದಾರೆ .

ಅಟಾರ್ನಿ ಜನರಲ್‌ರವರು ಕಾನೂನಿಗೆ ಸಂಬಂಧಿಸಿದ ವಿಷಯದ ಬಗ್ಗೆ ಜವಬ್ದಾರಿ ಹೊಂದಿರುತ್ತಾರೆ . ಕೆನಡಾದಲ್ಲಿ ಕಾನೂನು ಹಾಗೂ ಅಟಾರ್ನಿ ಜನರಲ್ ಸೇರಿಸಿ ಒಂದು ಕ್ಯಾಬಿನೆಟ್ ದರ್ಜೆ ಸಚಿವರನ್ನಾಗಿ ಮಾಡಲಾಗಿದೆ .

ಕೆನಡಾದಲ್ಲಿಯೂ ಕೂಡ ರಾಣಿಯ ಮುಖ್ಯ ಕಾನೂನು ಅಧಿಕಾರಿಯಾಗಿದ್ದಾರೆ . ಅಮೆರಿಕಾ ಸಂಯುಕ್ತ ಸಂಸ್ಥಾನದ ಸಂಯುಕ್ತ ಪದ್ಧತಿ ಸರ್ಕಾರದಲ್ಲಿ ಅಟಾರ್ನಿ ಜನರಲ್‌ರವರು ಕ್ಯಾಬಿನೆಟ್ ಕಾನೂನು ಸದಸ್ಯರು ಜಾರಿಗೊಳಿಸುವ ಅತ್ಯುನ್ನತ ಅಧಿಕಾರಿ ಹಾಗೂ ಸರ್ಕಾರದ ನ್ಯಾಯಾಧೀಶರ ಒಳಗೊಂಡ  ನ್ಯಾಯಾಂಗ ವಿಭಾಗದ ಮುಖ್ಯಸ್ಥರಾಗಿದ್ದಾರೆ .

ಬ್ರಿಟನ್‌ ಹಾಗೂ ವೇಲ್ಸ್‌ನಲ್ಲಿ ರಾಣಿಯ ಸರ್ಕಾರದ ಕಾನೂನು ಅಧಿಕಾರಿ ಹಾಗೂ ಸಲಹೆಗಾರರು ಇವರು ಕ್ಯಾಬಿನೆಟ್ ಸದಸ್ಯರಾಗಿದ್ದರು . ಭಾರತದಲ್ಲಿ ಜವಹರಲಾಲ ನೆಹರುರವರ ಅಧಿಕಾರವಧಿಯಲ್ಲಿ ಅಟಾರ್ನಿಜನರಲ್ ಹುದ್ದೆಯನ್ನು ಕೇಂದ್ರ ಕಾನೂನು ಸಚಿವಾಲಯದೊಂದಿಗೆ ವಿಲೀನ ಮಾಡುವ ಪ್ರಸ್ತಾವನೆ ಬಂದರೂ ಅದು ಕಾರ್ಯ ರೂಪಕ್ಕೆ ಬರಲಿಲ್ಲ .

ಅಟಾರ್ನಿಜನರಲ್ ನೇಮಕಕ್ಕೆ ಪ್ರಧಾನ ಮಂತ್ರಿಗಳು ರಾಷ್ಟ್ರಪತಿಗೆ ಶಿಫಾರಸ್ಸು ಮಾಡುವುರಿಂದ ಈ ಹುದ್ದೆ ನೇಮಕದಲ್ಲಿ ರಾಜಕೀಯ ಸಿಲುಕಿದೆ .

ಅಟಾರ್ನಿ ಜನರಲ್‌ಗಳು ಹಾಗೂ ವಿವಾದಗಳು

ಭಾರತದ ಅಟಾರ್ನಿ ಜನರಲ್‌ಗಳು ಕೆಲವೊಮ್ಮೆ ವಿವಾದಾತ್ಮಕ ತೀರ್ಮಾನ , ಹೇಳಿಕೆಯಿಂದ ವಿವಾದಕ್ಕೆ ಒಳಗಾಗುತ್ತಾರೆ ಹಾಗೂ ರಾಜಕೀಯ ಪಕ್ಷದ ಒಲವು ತೋರಿಸುತ್ತಾರೆ .

ಕೆಲವು ಮಂದಿ ಆಟಾರ್ನಿ ಜನರಲ್‌ಗಳು ತಮ್ಮ ನಿರ್ಣಯಗಳಿಂದ ಮತ್ತು ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ವಿವಾದಕ್ಕೊಳಗಾಗಿದ್ದಾರೆ . ಕೆಲವೊಮ್ಮೆ ಪಕ್ಷಗಳನ್ನು ಓಲೈಸಲು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಕಾರ್ಯನಿರ್ವಹಿಸಿದ್ದಾರೆ

ಉದಾ : 2005 ರಲ್ಲಿ ಮಾಯಾವತಿ ಅವರ ತಾಜ್ ಕಾರಿಡಾರ್ ಮೊಕದ್ದಮೆಗೆ ಸಂಬಂಧಿಸಿದಂತೆ ಅಟಾರ್ನಿ ಜನರಲ್ ಮಿಲನ್‌ ಕುಮಾರ್‌ ಬ್ಯಾನರ್ಜಿ ವಿವಾದಕ್ಕೊಳಗಾಗಿದ್ದರು ಹಾಗೂ ಬೋಪೋರ್ಸ್ ಹಗರಣದ ಕೇಂದ್ರ ಬಿಂದು ಕೋಟೋಚಿರವರ ವಿಷಯದಲ್ಲಿ ಒಟಾವಿಯೊ ವಿವಾದಕ್ಕೆ ಒಳಗಾದವರು .

ಅಟಾರ್ನಿ ಜನರಲ್‌ರವರ ಇತಿಮಿತಿಗಳು

1 ) ಭಾರತ ವಹಿಸಬಾರದು . ವಿರುದ್ಧ ವಕಾಲತ್ತು

2 ) ಭಾರತ ಸರ್ಕಾರ ಪರವಾಗಿ ವಹಿಸಿದ ವಕಾಲತ್ತಿಗೆ ವಿರುದ್ಧವಾದ ಮಂಡಿಸಬಾರದು ಹಾಗೂ ಮಾಹಿತಿ ನೀಡಬಾರದು .

3 ) ಭಾರತ ಸರ್ಕಾರದ ಅನುಮತಿ ಇಲ್ಲದೆ ಕ್ರಿಮಿನಲ್ ಮೊಕ್ಕದಮ್ಮೆ ಎದುರುಸುತ್ತಿರುವ ಆರೋಪಿಯನ್ನು ರಕ್ಷಿಸಬಾರದು .

4 ) ಭಾರತ ಸರ್ಕಾರದ ಅನುಮತಿ ಇಲ್ಲದೆ ಯಾವುದೇ ಕಂಪನಿಯ ಅಥವಾ ನಿಗಮದ ನಿರ್ದೇಶಕರ ಹುದ್ದೆಯನ್ನು ಅಲಂಕರಿಸುವಂತಿಲ್ಲ . ಅಟಾರ್ನಿಜನರಲ್ ರವರು ಭಾರತದ ಸರ್ಕಾರ ಪೂರ್ಣಾವಧಿಯ ಸಲಹೆಗಾರರಲ್ಲ ಇವರು ಸರ್ಕಾರಿ ಸೇವಕರೆಂದು ಪರಿಗಣಿಸಲಾಗಿಲ್ಲ . ಇವರ ಅಧಿಕಾರವಾಧಿ ಪೂರ್ಣ ಗೊಳಿಸಿದ ನಂತರ ಖಾಸಗಿಯಾಗಿ ವಕೀಲ ಖಾಸಗಿ ವಕೀಲ ವೃತ್ತಿ ಮುಂದುವರಿಸಬಹುದು . ಹುದ್ದೆಯಿಂದ ವಜಾಗೊಳಿಸುವುದಿಲ್ಲ .

ಅಟಾರ್ನಿ ಜನರಲ್ ನೇಮಕಾತಿ ಹುದ್ದೆಯಲ್ಲಿ ರಾಜಕಾರಣ

ಅಟಾರ್ನಿ ಜನರಲ್‌ರವರನ್ನು ಸರ್ಕಾರ ಸಮರ್ಥ ನ್ಯಾಯವಾದಿಯನ್ನು ನೇಮಕ ಮಾಡುತ್ತದೆ . ಆದರೆ ಇತ್ತೀಚಿನ ದಿನಗಳಲ್ಲಿ ಅಟಾರ್ನಿ ಜನರಲ್ ನೇಮಕ ರಾಜಕೀಯ ತಿರುವು ಪಡೆದಿದೆ . ಭಾರತದಲ್ಲಿ ಕೇಂದ್ರದಲ್ಲಿ ಯಾವ ಸರ್ಕಾರ ಅಸ್ಥಿತ್ವಕ್ಕೆ ಬರುತ್ತದೋ ಆ ಸರ್ಕಾರ ಬೇಕಾದ ಅಟಾರ್ನಿ ಜನರಲ್ ರವರನ್ನು ನೇಮಕ ಮಾಡುತ್ತಾರೆ . ಕೇಂದ್ರದಲ್ಲಿ ಹೊಸ ಸರ್ಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆ ಹಿಂದಿನ ಅಟಾರ್ನಿ ಜನರಲ್ ರಾಜೀನಾಮೆ ಪಡೆದುಕೊಂಡು ಹೊಸ ಸರ್ಕಾರಕ್ಕೆ ಅನುಕೂಲವಾದ ಅಟಾರ್ನಿಜನರಲ್‌ನ್ನು ನೇಮಕ ಮಾಡುತ್ತಾರೆ .

ಅಟಾರ್ನಿಜನರಲ್ ಹಾಗೂ ಸುಪ್ರೀಂಕೋರ್ಟ್‌ಗಳಲ್ಲಿ ಯಾರು ಉನ್ನತ ಸ್ಥಾನ

ಅಟಾರ್ನಿ ಜನರಲ್‌ರವರು ಸರ್ಕಾರದ ಅತ್ಯುನ್ನತ ಹಾಗೂ ಪ್ರಥಮ ಕಾನೂನು ಅಧಿಕಾರಿ . ಇವರು ಸರ್ಕಾರದ ಮಟ್ಟದಲ್ಲಿ ಉನ್ನತ ಅಧಿಕಾರಿ ಕೇಂದ್ರ ಸರ್ಕಾರದ ಪರವಾದ ಅಧಿಕಾರಿ ಆದರೆ ಸುಪ್ರೀಂಕೋರ್ಟ್ ಸರ್ಕಾರವಲ್ಲ ಇದು ರಾಜ್ಯಾಂಗ , ಕಾರ್ಯ ೦ ಗದಂತೆ ಪ್ರತ್ಯೇಕವಾದ ಒಂದು ಅಂಗ ಸುಪ್ರಿಂಕೋರ್ಟ್ ಎಂದು ಕೇಂದ್ರ ಸರ್ಕಾರವಲ್ಲ . ಕೇಂದ್ರ ಸರ್ಕಾರವನ್ನು ಎಚ್ಚರಿಸುವ ನಿರ್ದೇಶಿಸುವ ಒಂದು ಸ್ವತಂತ್ರ ಸಂಸ್ಥೆ ದೇಶದ ನ್ಯಾಯಾಂಗಕ್ಕೆ ಉನ್ನತ ಸ್ಥಾನ ಸುಪ್ರೀಂ ಕೋರ್ಟ್‌ನದ್ದು , ಅಟಾರ್ನಿಜನರಲ್ ಹಾಗೂ ಸುಪ್ರೀಂ ಕೋರ್ಟ್‌ಗಳೆರಡು ಪ್ರತ್ಯೇಕವಾದವು ಇವೆರಡನ್ನೂ ಹೋಲಿಸಲಾಗುವುದಿಲ್ಲ .

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳುಲಿಂಕ್ :

ಸ್ವಾತಂತ್ರ್ಯದ ಹಕ್ಕು

ಶೋಷಣೆ ವಿರುದ್ಧದ ಹಕ್ಕು

ಬಾಲಕಾರ್ಮಿಕ ನಿಷೇಧ

 

Comments

Leave a Reply

Your email address will not be published. Required fields are marked *